ಮಧುರೈ :ಒಳಚರಂಡಿ ಪೈಪ್ ರಿಪೇರಿಗೆಂದು ತೆರಳಿದ್ದ ಮೂವರು ಗುತ್ತಿಗೆ ಕಾರ್ಮಿಕರು ವಿಷ ಅನಿಲ ಸೇವನೆಯಿಂದಾಗಿ ಕೊಳಚೆ ತೊಟ್ಟಿಯಲ್ಲೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಪಳಂಗನಾಥಂನ ನೆಹರೂ ಪಟ್ಟಣದಲ್ಲಿ ನಡೆದಿದೆ.
ಒಳ ಚರಂಡಿ ದುರಸ್ತಿಗೆ ತೆರಳಿದ್ದ ಮೂವರು ವಿಷ ಅನಿಲ ಸೇವಿಸಿ ಸಾವು ಬಾವಿಯಂತಿರುವ ಕೊಳಚೆ ತೊಟ್ಟಿಯಲ್ಲಿ 30 ಅಡಿ ಆಳದಲ್ಲಿ ಒಳಚರಂಡಿ ಪೈಪ್‌ನಲ್ಲಿ ಬ್ಲಾಕ್ ಆಗಿದೆ. ಮಡಕ್ಕುಳಂನ ಶಿವಕುಮಾರ್, ಸರವಣನ್ ಮತ್ತು ಕೊಟ್ಟೈಮೇಡುವಿನ ಲಕ್ಷ್ಮಣನ್ ನಿಗಮದ ಗುತ್ತಿಗೆ ನೌಕರರು. ಮೂವರು ನಿಗಮದ ಗುತ್ತಿಗೆ ನೌಕರರು ಬ್ಲಾಕ್ನ್ನು ಸರಿಪಡಿಸಲು ತೊಟ್ಟಿಯೊಳಗೆ ಇಳಿದಿದ್ದಾರೆ.
ಓದಿ:ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಇಬ್ಬರು ಕಾರ್ಮಿಕರು ಸಾವು
ಮೂವರು ಗುತ್ತಿಗೆ ಕಾರ್ಮಿಕರು ಪೈಪ್ ದುರಸ್ತಿಗೆ ತೆರಳಿದ್ದರು. ಆಗ ಶಿವಕುಮಾರ್ ಕೊಳಚೆ ನೀರಿನ ತೊಟ್ಟಿಗೆ ಜಾರಿ ಬಿದ್ದಿದ್ದಾರೆ. ಅವರನ್ನು ಕಾಪಾಡಲು ಲಕ್ಷ್ಮಣನ್ ಮತ್ತು ಸರವಣನ್ ತೆರಳಿದ್ದಾರೆ. ಆದರೆ, ವಿಷಾನಿಲ ಸೇವನೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಈ ಮಾಹಿತಿಯನ್ನು ಕೂಡಲೇ ಸ್ಥಳೀಯ ಪೊಲೀಸರಿಗೆ ನೀಡಲಾಯಿತು.
ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಬಾವಿಯಲ್ಲಿ ಮೂವರು ಮೃತದೇಹಗಳನ್ನು ಹೊರ ತೆಗೆದರು. ಬಳಿಕ ಆ ಮೂವರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಈ ಘಟನೆ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.