ಹೈದರಾಬಾದ್ :ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಜರಾಸಂಗಮ ಕಸ್ತೂರಬಾ ಗಾಂಧಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮೂವರು ಶಿಕ್ಷರು, 12 ವಿದ್ಯಾರ್ಥಿಗಳಿಗೆ ಕೋವಿಡ್ ತಗುಲಿರುವುದು ದೃಢವಾಗಿದೆ.
ನಿನ್ನೆ ತೆಲಂಗಾಣದಲ್ಲಿ 178 ಹೊಸ ಕೇಸ್, ಓರ್ವ ರೋಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 2,98,631 ಮಂದಿಗೆ ಸೋಂಕು ಅಂಟಿದ್ದು, 1,633 ಜನರು ಬಲಿಯಾಗಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ 1.64 ಲಕ್ಷ ಕೋವಿಡ್ ಕೇಸ್ ಸಕ್ರಿಯ.. ನಾಳೆಯಿಂದ 2ನೇ ಹಂತದ ವ್ಯಾಕ್ಸಿನೇಷನ್, ಲಸಿಕೆಗೆ 250 ರೂ. ನಿಗದಿ
ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ನಿತ್ಯ 200ಕ್ಕೂ ಕಡಿಮೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆಯುವ ಮೇಕೆ ಸಂತೆಯಲ್ಲಿ ಗಡಿ ಜಿಲ್ಲೆಯಾದ ಮಹಾರಾಷ್ಟ್ರದಿಂದ ಬಹುಪಾಲು ವ್ಯಾಪಾರಿಗಳು ಬರುತ್ತಾರೆ.
ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನಿಜಾಮಾಬಾದ್ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮೇಕೆ ಸಂತೆ ಮಾರುಕಟ್ಟೆಯಲ್ಲಿ ಹೊಸ ನಿಯಮಗಳನ್ನು ತರಲಿದ್ದೇವೆ ಎಂದು ರಾಜ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ತಿಳಿಸಿದ್ದಾರೆ.