ಕರ್ನಾಟಕ

karnataka

ETV Bharat / bharat

ಬೈಕ್​ - ಲಾರಿ ಮಧ್ಯೆ ಅಪಘಾತ: ಮದುವೆಗೆ ತೆರಳುತ್ತಿದ್ದ 3 ವಿದ್ಯಾರ್ಥಿಗಳು ದಾರುಣ ಸಾವು! - ಚಿತ್ತೂರು ಅಪಘಾತ ಸುದ್ದಿ

ಬೈಕ್​ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿ ಮದುವೆಗೆ ತೆರಳುತ್ತಿದ್ದ 3 ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಸಂಭವಿಸಿದೆ.

3 students killed in road accident, 3 students killed in road accident at Chittoor, Chittoor crime news, Chittoor accident news, ರಸ್ತೆ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸಾವು, ಚಿತ್ತೂರಿನಲ್ಲಿ ರಸ್ತೆ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸಾವು, ಚಿತ್ತೂರು ಅಪರಾಧ ಸುದ್ದಿ, ಚಿತ್ತೂರು ಅಪಘಾತ ಸುದ್ದಿ,
ಬೈಕ್​-ಲಾರಿ ಮಧ್ಯೆ ಅಪಘಾತ

By

Published : Feb 13, 2021, 11:34 AM IST

ಚಿತ್ತೂರು: ಬೈಕ್​ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಮದನಪಲ್ಲೆ ತಾಲೂಕಿನ ಆರೋಗ್ಯವರಂ ಗ್ರಾಮದ ಬಳಿ ಸಂಭವಿಸಿದೆ.

ಮದನಪಲ್ಲೆಯ ರಾಮಾರಾವು ನಗರದ ನಿವಾಸಿ ಧನುಶ್​ (16), ರಾಮಿರೆಡ್ಡಿ ಲೇಔಟ್​ ನಿವಾಸಿಗಳಾದ ತರುಣ್​ಕುಮಾರ್​ ರೆಡ್ಡಿ (16) ಮತ್ತು ಶ್ರೀಹರಿ (18) ಸೇರಿ ಮೂವರು ಬೈಕ್​ ಮೇಲೆ ಗುರ್ರಂಕೊಂಡ ತಾಲೂಕಿನ ತರಿಗೊಂಡದಲ್ಲಿ ನಡೆಯುತ್ತಿದ್ದ ಮದುವೆಗೆ ಹಾಜರಾಗಲು ತೆರಳಿದ್ದಾರೆ.

ರಾತ್ರಿ ಹೊತ್ತು ಪ್ರಯಾಣಿಸುತ್ತಿದ್ದ ಇವರ ಬೈಕ್​ ಮತ್ತು ಆರೋಗ್ಯವರಂ ಬಳಿ ಎದುರಿಗೆ ಬಂದ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಮೂವರು ಸ್ಥಳದಲ್ಲೇ ಪ್ರಾಣ ತೆತ್ತಿದ್ದಾರೆ. ಸುದ್ದಿ ತಿಳಿದ ಕೂಡಲೇ ರೂರಲ್​ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಿಮಿತ್ತ ಆಸ್ಪತ್ರೆಗೆ ರವಾನಿಸಿದರು.

ಈ ಘಟನೆ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details