ಶೋಪಿಯಾನ್(ಜಮ್ಮು ಕಾಶ್ಮೀರ):ಜಮ್ಮು ಮತ್ತು ಕಾಶ್ಮೀರದಶೋಪಿಯಾನ್ ಜಿಲ್ಲೆಯ ಸೆಡೋವ್‌ನಲ್ಲಿ ಖಾಸಗಿ ಬಾಡಿಗೆ ವಾಹನವೊಂದರೊಳಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಟಾಟಾ ವಾಹನದಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಸೇನೆಯ ಹೇಳಿಕೆಯ ಪ್ರಕಾರ, ವಾಹನದ ಬ್ಯಾಟರಿಯಲ್ಲಿನ ಅಸಮರ್ಪಕ ಕಾರ್ಯದಿಂದಾಗಿ ಸ್ಫೋಟ ಸಂಭವಿಸಿದೆ. ಗ್ರೆನೇಡ್‌ನಿಂದ ಅಥವಾ ಈಗಾಗಲೇ ವಾಹನದೊಳಗೆ ಐಇಡಿ ಹಾಕಿರುವ ಕಾರಣ ಅಥವಾ ಬ್ಯಾಟರಿಯ ಅಸಮರ್ಪಕ ಕಾರ್ಯದಿಂದ ಸ್ಫೋಟಗೊಂಡಿರುವ ಶಂಕೆ ಇದೆ. ಆದರೆ ಸ್ಫೋಟದ ಸ್ವರೂಪ ಮತ್ತು ಮೂಲದ ಬಗ್ಗೆ ಖಚಿತವಾಗಿಲ್ಲ. ಈ ಕುರಿತು ತನಿಖೆ ಮಾಡಲಾಗುವುದು ಎಂದು ಕಾಶ್ಮೀರದ ಐಜಿಪಿ ತಿಳಿಸಿದ್ದಾರೆ.