ಜೈಪುರ: ರಾಜಸ್ಥಾನದ ಶ್ರೀಗಂಗನಗರ ಜಿಲ್ಲೆಯಲ್ಲಿ ತರಬೇತಿ ನಡೆಯುತ್ತಿದ್ದ ವೇಳೆ ಮೂವರು ಸೈನಿಕರು ಜೀವಂತ ಸುಟ್ಟು ಕರಕಲಾಗಿದ್ದು, ಐವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾತ್ರಿ ವೇಳೆ ನಡೆಯುತ್ತಿದ್ದ ತರಬೇತಿ ಕಾರ್ಯದಲ್ಲಿ ದುರದೃಷ್ಟವಶಾತ್ ಸಾವು ನೋವುಗಳು ವರದಿಯಾಗಿವೆ ಎಂದು ರಕ್ಷಣಾ ಪಿಆರ್ಒ ಲೆಫ್ಟಿನೆಂಟ್ ಕರ್ನಲ್ ಅಮಿತಾಬ್ ಶರ್ಮಾ ಮಾಹಿತಿ ನೀಡಿದರು.
ಗಾಯಾಳು ಸೈನಿಕರನ್ನು ಎಂ.ಎಚ್.ಸುರತ್‌ಗಢದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಸೈನಿಕರಿಗೆ ವಿಭಿನ್ನ ತರಬೇತಿ ನೀಡುತ್ತಿರುವಾಗ ವಾಡಿಕೆಯಂತೆ ಈ ಪ್ರಯೋಗವನ್ನು ಮಾಡಿಸಲಾಗುತ್ತಿತ್ತು. ಈ ವೇಳೆ ದುರಂತ ನಡೆದಿದೆ ಎಂದು ಅವರು ಹೇಳಿದ್ದಾರೆ.
ತರಬೇತಿ ವೇಳೆ ಮೂವರು ಸೈನಿಕರು ಬೆಂಕಿಗಾಹುತಿ ಇದನ್ನೂಓದಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ: ಸಿಆರ್‌ಪಿಎಫ್ ಯೋಧ ಹುತಾತ್ಮ, ಇಬ್ಬರಿಗೆ ಗಾಯ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘಟನೆ ಬಗ್ಗೆ ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ. ಅವಘಡದಿಂದ ದುಃಖವಾಗಿದೆ. ಮೂವರು ಸೇನಾ ಸೈನಿಕರು ಪ್ರಾಣ ಕಳೆದುಕೊಂಡಿದ್ದು, ಐವರು ಗಾಯಗೊಂಡಿದ್ದಾರೆ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪ. ಕುಟುಂಬದವರಿಗೆ ದುರ್ಘಟನೆಯನ್ನು ಅರಗಿಸಿಕೊಳ್ಳುವ ಶಕ್ತಿ ಬರಲಿ ಎಂದಿದ್ದಾರೆ.