ಹನುಮಾನ್‌ಗಢ(ರಾಜಸ್ಥಾನ):2018ರಲ್ಲಿ ನಡೆದಿದ್ದ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆ ಫಲಿತಾಂಶ ಇದೀಗ ಬಹಿರಂಗಗೊಂಡಿದ್ದು, ಮೂವರು ಸಹೋದರಿಯರು ಪಾಸ್ ಆಗುವ ಮೂಲಕ ಹೊಸದೊಂದು ಸಾಧನೆ ನಿರ್ಮಾಣ ಮಾಡಿದ್ದಾರೆ. ರಾಜಸ್ಥಾನದ ಹನುಮಾನ್ಗಢದ ಸಹದೇವ್ ಸಹಕರ್ ಅವರ ಮೂವರು ಮಕ್ಕಳಾಗಿರುವ ಅನ್ಶು,ರೀತು ಹಾಗೂ ಸುಮನ್ ಈ ಪರೀಕ್ಷೆ ಮಾಡಿದ್ದಾರೆ.
ಈಗಾಗಲೇ ಇವರ ಇಬ್ಬರು ಸಹೋದರಿಯರಾದ ರೋಮಾ ಮತ್ತು ಮಂಜು ಪರೀಕ್ಷೆ ಪಾಸ್ ಮಾಡಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಎಲ್ಲ ಐವರು ಸಹೋದರಿಯರು ರಾಜಸ್ಥಾನ ಆಡಳಿತ ಸೇವಾ(ಆರ್ಎಎಸ್) ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ. ಇವರು ಪಾಸ್ ಆಗಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಟ್ವಿಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.