ಲತೇಹರ್ (ಜಾರ್ಖಂಡ್):ಜಿಲ್ಲೆಯ ಮಾನಿಕಾ ಪೊಲೀಸ್ ಠಾಣೆ ಪ್ರದೇಶದ ನಿವೇದ್ ಗ್ರಾಮದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಗ್ರಾಮದ ಒಂದೇ ಕುಟುಂಬದ ಮೂರು ಜನರು ವಿದ್ಯುತ್ ಶಾಖ್ನಿಂದ ಮೃತಪಟ್ಟಿದ್ದಾರೆ.
ಭತ್ತ ನಾಟಿ ಮಾಡಲು ತೆರಳಿದ್ದ ಒಂದೇ ಕುಟುಂಬದ ಮೂವರು ವಿದ್ಯುತ್ಗೆ ಬಲಿ! - ಲತೇಹರ್ನಲ್ಲಿ ಒಂದೇ ಕುಟುಂಬದ ಮೂವರು ವಿದ್ಯುತ್ಗೆ ಬಲಿ,
ಭತ್ತ ನಾಟಿ ಮಾಡಲು ತೆರಳಿದ್ದ ಒಂದೇ ಕುಟುಂಬದ ಮೂವರು ವಿದ್ಯುತ್ ಶಾಕ್ಗೆ ಬಲಿಯಾಗಿರುವ ಘಟನೆ ಜಾರ್ಖಂಡ್ನ ಲತೇಹರ್ನಲ್ಲಿ ನಡೆದಿದೆ.
![ಭತ್ತ ನಾಟಿ ಮಾಡಲು ತೆರಳಿದ್ದ ಒಂದೇ ಕುಟುಂಬದ ಮೂವರು ವಿದ್ಯುತ್ಗೆ ಬಲಿ! 3 person of same family died, 3 person of same family died in latehar, latehar crime, ಒಂದೇ ಕುಟುಂಬದ ಮೂವರು ವಿದ್ಯುತ್ಗೆ ಬಲಿ, ಲತೇಹರ್ನಲ್ಲಿ ಒಂದೇ ಕುಟುಂಬದ ಮೂವರು ವಿದ್ಯುತ್ಗೆ ಬಲಿ, ಲತೇಹರ್ ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/768-512-12606999-538-12606999-1627539966997.jpg)
ಭತ್ತ ನಾಟಿ ಮಾಡಲು ತೆರಳಿದ್ದ ಒಂದೇ ಕುಟುಂಬದ ಮೂವರು ವಿದ್ಯುತ್ಗೆ ಬಲಿ
ಮೃತರು ಗಂಗೇಶ್ವರ ಸಿಂಗ್, ಧನೋರಾ ದೇವಿ ಮತ್ತು ಬಬ್ಲು ಸಿಂಗ್ ಎಂದು ಗುರುತಿಸಲಾಗಿದೆ. ಮೂವರೂ ಭತ್ತ ನಾಟಿ ಮಾಡಲು ತಮ್ಮ ಹೊಲಗಳಿಗೆ ನೀರು ಹರಿಸಲು ತೆರಳಿದ್ದರು. ಈ ಸಮಯದಲ್ಲಿ ವಿದ್ಯುತ್ ತಂತಿ ತುಳಿದಿದ್ದಾರೆ. ಇದರಿಂದಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ನಂತರ ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.