ಗಿರಿಡಿಹ್:ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಬಿರ್ನಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲ್ಗೊ ಪಂಚಾಯತ್ ವ್ಯಾಪ್ತಿಯ ಸಲೈಡಿಹ್ ಗ್ರಾಮದಲ್ಲಿ ನಡೆದಿದೆ.
ಸಾವಿಗೆ ಕಾರಣವಾದ ಚಳಿಗೆ ಹಚ್ಚಿದ ಬೆಂಕಿ.. ಒಂದೇ ಕುಟುಂಬದ ಮೂವರು ಸಜೀವ ದಹನ! - ಗಿರಿಡಿಹ್ ಬೆಂಕಿ ಅವಘಡ,
ಚಳಿ ಹಿನ್ನೆಲೆ ಹಚ್ಚಿದ ಬೆಂಕಿ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದಿರುವ ಘಟನೆ ಜಾರ್ಖಂಡ್ನ ಗಿರಿಡಿಹ್ ಜಿಲ್ಲೆಯಲ್ಲಿ ಸಂಭವಿಸಿದೆ.
![ಸಾವಿಗೆ ಕಾರಣವಾದ ಚಳಿಗೆ ಹಚ್ಚಿದ ಬೆಂಕಿ.. ಒಂದೇ ಕುಟುಂಬದ ಮೂವರು ಸಜೀವ ದಹನ! 3 people died, 3 people died in a fire, 3 people died in a fire in Giridih, Giridih fire incident, Giridih fire incident news, ಮೂವರು ಸಾವು, ಬೆಂಕಿ ಅವಘಡದಲ್ಲಿ ಮೂವರು ಸಾವು, ಗಿರಿಡಿಹ್ದಲ್ಲಿ ಬೆಂಕಿ ಅವಘಡದಲ್ಲಿ ಮೂವರು ಸಾವು, ಗಿರಿಡಿಹ್ ಬೆಂಕಿ ಅವಘಡ, ಗಿರಿಡಿಹ್ ಬೆಂಕಿ ಅವಘಡ ಸುದ್ದಿ,](https://etvbharatimages.akamaized.net/etvbharat/prod-images/768-512-10631607-308-10631607-1613375708474.jpg)
ಸೀತಾರಾಮ್ ಯಾದವ್ ಅವರ ತಾಯಿ ಮುಡ್ರಿಕಾ ದೇವಿ (55 ವರ್ಷ), ಸಹೋದರಿ ಗುಡಿಯಾ ದೇವಿ (16 ವರ್ಷ) ಮತ್ತು ಭಾಗಿನಿ ಜ್ಯೂಲಿ ಕುಮಾರಿ (7 ವರ್ಷ) ಒಣಹುಲ್ಲಿನ ಗುಡಿಸಲಿನಲ್ಲಿ ಮಲಗಿದ್ದರು. ಚಳಿ ಇದ್ದ ಕಾರಣ ಬೆಂಕಿ ಹಾಕಿದ್ದಾರೆ. ಆ ಬೆಂಕಿ ಗುಡಿಸಲ ತುಂಬೆಲ್ಲ ವ್ಯಾಪಿಸಿದೆ. ಗುಡಿಸಲಿಂದ ಹೊರ ಬರಲಾಗದೇ ಮೂವರು ಅಲ್ಲೆ ಸಿಲುಕಿಕೊಂಡಿದ್ದಾರೆ. ಘಟನೆ ಬಗ್ಗೆ ಆಲಿಸಿದ ಗ್ರಾಮಸ್ಥರು ಕೂಡಲೇ ಬೆಂಕಿ ನಂದಿಸಲ ಯತ್ನಿಸಿದರಾದ್ರೂ ಪ್ರಯೋಜವಾಗಲಿಲ್ಲ. ಮೂವರು ಗುಡಿಸಲಿಂದ ಹೊರ ಬರದೇ ಸಜೀವ ದಹನಗೊಂಡಿರುವುದಾಗಿ ಪೊಲೀಸ್ ಇನ್ಸ್‌ಪೆಕ್ಟರ್ ದಿನೇಶ್ ಸಿಂಗ್ ಹೇಳಿದ್ದಾರೆ.
ತಮ್ಮವರನ್ನು ಕಳೆದಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತು ಬಿರ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.