ಭಿಲ್ವಾರ್(ರಾಜಸ್ಥಾನ):ಬಾವಿ ನೀರು ಎತ್ತಲು ಮೋಟಾರ್ ಅಳವಡಿಸುವ ವೇಳೆ ವಿದ್ಯುತ್ ಪ್ರವಹಿಸಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 80 ಅಡಿ ಆಳದ ಬಾವಿಗೆ ಮೋಟಾರ್ ಅಳವಡಿಸಲು ಎಂದು ಮೂವರು ನೀರಿನಲ್ಲಿ ಇಳಿದಿದ್ದರು. ಮೋಟಾರ್ ಆನ್ ಮಾಡಲು ತಿಳಿಸಿದಾಗ ನೀರಿನಲ್ಲಿದ್ದ ಮೂವರಿಗೆ ವಿದ್ಯುತ್ ಪ್ರವಹಿಸಿದೆ. ಇದರಿಂದ ಅವರು ಅಲ್ಲೇ ಪ್ರಾಣ ಬಿಟ್ಟಿದ್ದಾರೆ.
ಬಾವಿಯಲ್ಲಿ ಕಾದಿದ್ದ ಜವರಾಯ.. ಮೋಟಾರ್ ಅಳವಡಿಸುವಾಗ ವಿದ್ಯುತ್ ಪ್ರವಹಿಸಿ ಮೂವರು ದುರ್ಮರಣ - ಮರಣೋತ್ತರ ಪರೀಕ್ಷೆ
ಮೋಟಾರ್ ಅಳವಡಿಸಲು ಬಾವಿಗಿಳಿದಾಗ ವಿದ್ಯುತ್ ಪ್ರವಹಿಸಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಮೋಟಾರ್ ಅಳವಡಿಸುವಾಗ ವಿದ್ಯುತ್ ಪ್ರವಹಿಸಿ ಮೂವರು ದುರ್ಮರಣ
ಸುದ್ದಿ ತಿಳಿದು ಗ್ರಾಮಸ್ಥರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ. ಬುಧವಾರ ಸಂಜೆ 4 ಗಂಟೆಗೆ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬಳಿಕ ಎಸ್ಡಿಆರ್ಎಫ್ ತಂಡವನ್ನು ಕರೆಸಿ ಮೃತದೇಹಗಳನ್ನು ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ಹೊರತೆಗೆಯಲಾಯಿತು. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಓದಿ:ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದ ಮೂವತ್ತನೇ ವಯಸ್ಸಿಗೆ ನಟೋರಿಯಸ್ ಎನಿಸಿಕೊಂಡ ಕಳ್ಳ !