ಬಾಲಾಘಾಟ್(ಮಧ್ಯಪ್ರದೇಶ) : ಜಿಲ್ಲೆಯ ಕಡ್ಲಾ ಗ್ರಾಮದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿದಂತೆ ಮೂವರು ನಕ್ಸಲರು ಹತರಾಗಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಟ್ವಿಟರ್ ಖಾತೆಯಲ್ಲಿ ಗುಂಡಿನ ದಾಳಿ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹತರಾದ ನಕ್ಸಲರನ್ನು ಅವರ ವಿಭಾಗೀಯ ಸಮಿತಿ ಸದಸ್ಯ ನಾಗೇಶ್ ಎಂದು ಗುರುತಿಸಲಾಗಿದೆ ಹಾಗೆ ಕಮಾಂಡರ್ಗಳಾದ ಮನೋಜ್ ಮತ್ತು ಮಹಿಳೆ ರಮೆರನ್ನು ಸಹ ಈ ವೇಳೆ ಹೊಡೆದುರುಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಕ್ಸಲರಿಂದ ಎಕೆ-47, .303 ರೈಫಲ್ ಮತ್ತು 12-ಬೋರ್ ಆ್ಯಕ್ಷನ್ ಗನ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಚೌಹಾಣ್ ಅವರು ಪೊಲೀಸ್ ಅಧಿಕಾರಿಗಳ ಶೌರ್ಯವನ್ನು ಶ್ಲಾಘಿಸಿದ್ದು, ಅವರಿಗೆ ಬಡ್ತಿ ಮತ್ತು ಶೌರ್ಯ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ಶಾಂತಿಯ ದ್ವೀಪವಾಗಿದ್ದು, ನಕ್ಸಲೀಯರಾಗಲಿ ಅಥವಾ ಯಾವುದೇ ಅಪರಾಧಿಗಳಾಗಲಿ, ಶಾಂತಿಯನ್ನು ಕದಡಲು ಯಾರಿಗೂ ಅವಕಾಶವಿಲ್ಲ. ನಮ್ಮ ಸರ್ಕಾರವು ಸಜ್ಜನರಿಗೆ ಹೂವಿಗಿಂತ ಮೃದುವಾಗಿದೆ ಮತ್ತು ದುಷ್ಟರಿಗೆ ಗುಡುಗುಗಿಂತ ಕಠೋರವಾಗಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: 16 ವರ್ಷದ ಹುಡುಗಿ ಮದುವೆಯಾಗಲು ಏನೂ ತೊಂದರೆ ಇಲ್ಲ ಎಂದ ಪಂಜಾಬ್ - ಹರಿಯಾಣ ಹೈಕೋರ್ಟ್!