ನವದೆಹಲಿ: ಭಾರತೀಯ ವಾಯುಪಡೆಗೆ ಮತ್ತಷ್ಟು ಬಲ ಬಂದಿದ್ದು, 3 ರಫೇಲ್ ವಿಮಾನಗಳ ನಾಲ್ಕನೇ ಬ್ಯಾಚ್ ಬುಧವಾರ ಸಂಜೆ ಭಾರತಕ್ಕೆ ಬಂದಿಳಿದಿದೆ. ರಫೇಲ್ ಜೆಟ್ಗಳು ಫ್ರಾನ್ಸ್‌ನಿಂದ ತಡೆರಹಿತವಾಗಿ ಹಾರಾಟ ನಡೆಸಿದ್ದು, ಮಾರ್ಗ ಮಧ್ಯೆ ಇಂಧನ ಪೂರೈಸಿದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಾಯುಪಡೆಗೆ ಐಎಎಫ್ ಧನ್ಯವಾದ ತಿಳಿಸಿದೆ.
ಭಾರತಕ್ಕೆ ಬಂದಿಳಿದ ರಫೇಲ್ 4ನೇ ಬ್ಯಾಚ್: ಯುಎಇ ವಾಯುಪಡೆಗೆ ಐಎಎಫ್ ಧನ್ಯವಾದ - ರಫೇಲ್ ಖರೀದಿ
ಮಾರ್ಗ ಮಧ್ಯದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ವಾಯುಪಡೆ ಸಹಕಾರದಿಂದ ಇಂಧನ ಪೂರೈಸಿಕೊಂಡ ರಫೇಲ್ ವಿಮಾನಗಳ ಮತ್ತೊಂದು ಬ್ಯಾಚ್ ಭಾರತಕ್ಕೆ ತಲುಪಿದೆ.

ಮಾರ್ಗ ಮಧ್ಯದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ವಾಯುಪಡೆ ಸಹಕಾರದಿಂದ ಇಂಧನ ಪೂರೈಸಿಕೊಂಡ ರಫೇಲ್ ವಿಮಾನಗಳ ಮತ್ತೊಂದು ಬ್ಯಾಚ್ ಭಾರತದತ್ತ ಹೊರಟಿದೆ. ಭಾರತೀಯ ವಾಯುಪಡೆಗೆ ಮತ್ತಷ್ಟು ಬಲ ಸಿಗಲಿದೆ ಎಂದು ಫ್ರಾನ್ಸ್ನ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿತ್ತು.
ಈ ಮೂರು ಜೆಟ್‌ಗಳ ಆಗಮನದೊಂದಿಗೆ ರಫೇಲ್ ವಿಮಾನಗಳ ಸಂಖ್ಯೆ 14ಕ್ಕೆ ಏರಿದೆ. 5 ರಫೇಲ್ ಜೆಟ್‌ಗಳ ಮೊದಲ ಬ್ಯಾಚ್ ಜುಲೈ 29ರಂದು ಭಾರತಕ್ಕೆ ಆಗಮಿಸಿತ್ತು. ಬಳಿಕ ನವೆಂಬರ್ 3ರಂದು 3 ರಫೇಲ್ ಜೆಟ್‌ಗಳ ಎರಡನೇ ಬ್ಯಾಚ್, ಹಾಗೂ ಜನವರಿ 27ರಂದು ಮತ್ತೊಂದು ಮೂರು ಜೆಟ್‌ಗಳ ಮೂರನೇ ಬ್ಯಾಚ್ ಐಎಎಫ್‌ಗೆ ಸೇರ್ಪಡೆಗೊಂಡಿತ್ತು. ಒಟ್ಟೂ 36 ಜೆಟ್‌ಗಳನ್ನು ಫ್ರಾನ್ಸ್‌ನಿಂದ ಭಾರತವು ಖರೀದಿಸುವ 59,000 ಕೋಟಿ ರೂ.ಗಳ ಒಪ್ಪಂದ ಇದಾಗಿದೆ.