ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಹೊಸ ಚಿತ್ರಮಂದಿರ: ಮನೋಜ್ ಸಿನ್ಹಾ

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ, ಗಂದರ್‌ಬಾಲ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ನಲ್ಲಿ ಮೂರು ಹೊಸ ಚಿತ್ರಮಂದಿರಗಳು ತೆರೆಯಲಿವೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.

Lieutenant Governor Manoj Sinha
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

By

Published : Jul 19, 2023, 2:31 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಬೆಳೆಯುತ್ತಿರುವ ಸಾಂಸ್ಕೃತಿಕ ದೃಶ್ಯಕ್ಕೆ ಸಾಕ್ಷಿಯಾಗಿ ಬಂಡಿಪೋರಾ, ಗಂದರ್‌ಬಾಲ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ನಲ್ಲಿ ಮೂರು ಹೊಸ ಚಿತ್ರಮಂದಿರಗಳು ತೆರೆಯಲಿವೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.

ಶ್ರೀನಗರದ ಸಂಗೀತ ನಾಟಕ ಅಕಾಡೆಮಿ ಟ್ಯಾಗೋರ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ ಅಮೃತ ಯುವ ಕಲೋತ್ಸವ ಕಾರ್ಯಕ್ರಮವನ್ನು ಎಲ್‌ಜಿ ಸಕ್ಸೇನಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶಾದ್ಯಂತ ಕಲಾವಿದರು ಕಾಶ್ಮೀರಕ್ಕೆ ಆಗಮಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ, ವಿವಿಧ ಕಲೆಗಳನ್ನು ಕಲಿಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಶಾಂತಿಯ ನಾಡಿನಲ್ಲಿ ಕಲೆ ಅರಳುತ್ತದೆ:ಬಳಿಕ ಮಾತನಾಡಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ "ಕಳೆದ ಹಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದ ಜನರ ಕನಸು ಮತ್ತು ಆಕಾಂಕ್ಷೆಗಳನ್ನು ಕೊಲ್ಲಲು ನೆರೆಯ ಪಾಕಿಸ್ತಾನ ಮತ್ತು ಕೆಲ ಜನರು ಯತ್ನಿಸುತ್ತಿದ್ದಾರೆ. ಆದರೆ ಇಲ್ಲಿನ ನಾಗರಿಕರು, ಯುವಕರು ಹೊಸ ವಾತಾವರಣವನ್ನು ಸೃಷ್ಟಿಸಲು ಹವಣಿಸುತ್ತಿದ್ದಾರೆ. ಎಲ್ಲಿ ಶಾಂತಿ ಇಲ್ಲವೋ ಅಲ್ಲಿ ಕಲೆ ಬೆಳೆಯುವುದಿಲ್ಲ. ಶಾಂತಿಯ ನಾಡಿನಲ್ಲಿ ಮಾತ್ರ ಕಲೆ ಅರಳುತ್ತದೆ" ಎಂದರು.

30 ವರ್ಷಗಳ ನಂತರ ಸಣ್ಣ ನಗರಗಳಲ್ಲಿಯೂ ಚಿತ್ರಮಂದಿರಗಳನ್ನು ತೆರೆಯಲಾಗುತ್ತಿದೆ. ಕೆಲವು ದಿನಗಳ ಹಿಂದೆ ಬಾರಾಮುಲ್ಲಾ ಮತ್ತು ಹಂದ್ವಾರಾದಲ್ಲಿ ಚಿತ್ರಮಂದಿರವನ್ನು ತೆರೆಯಲಾಗಿತ್ತು. ಕಳೆದ ವರ್ಷ ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ಚಿತ್ರಮಂದಿರಗಳನ್ನು ಆರಂಭಿಸಲಾಗಿತ್ತು. ಈ ವರ್ಷ ತೆರೆಯಲಿರುವ 3 ಚಿತ್ರಮಂದಿರಗಳು ಸೇರಿ ಒಟ್ಟು ಚಿತ್ರಮಂದಿರಗಳ ಸಂಖ್ಯೆ ಏಳು ಆಗಲಿದೆ. ಹಿಂದುಳಿದ ಪ್ರದೇಶಗಳಲ್ಲಿ ಚಿತ್ರಮಂದಿರಗಳ ಸ್ಥಾಪನೆ ಪ್ರಚಾರದತ್ತ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯ ಬೇರು ಬಲಿಷ್ಠವಾಗಿದೆ: ಪ್ರಪಂಚದ ಅನೇಕ ಸಂಸ್ಕೃತಿಗಳು ಹಾಗೂ ನಾಗರಿಕತೆಗಳು ಕಣ್ಮರೆಯಾಗಿವೆ. ಆದರೆ ಎಲ್ಲ ಸವಾಲುಗಳನ್ನು ಮೆಟ್ಟಿ ಭಾರತೀಯ ಸಂಸ್ಕೃತಿ ತನ್ನ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಂಡಿದೆ. ಭಾರತೀಯ ಸಂಸ್ಕೃತಿಯ ಬೇರು ಬಲಿಷ್ಠವಾಗಿದೆ. ಸಿನೆಮಾ, ನೃತ್ಯ, ಸಂಗೀತ ಮತ್ತು ರಂಗಭೂಮಿ ಇವು ಕೇವಲ ಕಲಾ ಪ್ರಕಾರಗಳಲ್ಲ. ಬದಲಾಗಿ ನಾಗರಿಕತೆಯ ಅಸ್ತಿತ್ವ. ಕಲಾವಿದರು ದೇಶದ ನಿಜವಾದ ಆಸ್ತಿ. ಅವರು ಹೊಂದಿರುವ ಸಂಪತ್ತನ್ನು ಯಾವುದೇ ಭೌತಿಕ ಸಂಪತ್ತಿನ ಜತೆ ಸಮೀಕರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಕಲಾವಿದರು ಸಾಕಷ್ಟು ತೊಂದರೆಗೀಡಾಗಿದ್ದಾರೆ. ಕಾಶ್ಮೀರ ಇದಕ್ಕೆ ಹೊರತಾಗಿರಲಿಲ್ಲ. ಆದಾಗ್ಯೂ, ಇತ್ತೀಚಿನ ಅಭಿವೃದ್ಧಿ ಮತ್ತು ವಿವಿಧ ಜಿಲ್ಲೆಗಳಲ್ಲಿ ಚಿತ್ರಮಂದಿರಗಳ ಸ್ಥಾಪನೆ ಯು ಕಲೆಯ ಪುನರುಜ್ಜೀವನ ಮತ್ತು ಸಹಜ ಸ್ಥಿತಿಗೆ ಮರಳುವುದನ್ನು ಸೂಚಿಸುತ್ತದೆ. ಈಗ ಕಲಾವಿದರನ್ನು ನೋಡಲು ನನಗೆ ಸಂತೋಷವಾಗಿದೆ. ದೇಶದ ಇತರ ಭಾಗಗಳಿಂದ ಕಾಶ್ಮೀರಕ್ಕೆ ತಮ್ಮ ಕಲೆಯನ್ನು ಪ್ರದರ್ಶಿಸಲು ಮತ್ತು ಹೊಸ ಕಲೆಯನ್ನು ಕಲಿಯಲು ಆಗಮಿಸುತ್ತಿರುವ ಕಲಾಕಾರರನ್ನು ನೋಡಿ ಆನಂದವಾಗಿದೆ. ಈಗ ನಮ್ಮ ಕಲಾವಿದರು ಜಮ್ಮು ಮತ್ತು ಕಾಶ್ಮೀರದ ಕಳೆದುಹೋದ ವೈಭವವನ್ನು ಮರಳಿ ತರಲು ಹೊಸ ಶಕ್ತಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಮನೋಜ್ ಸಿನ್ಹಾ ಹರ್ಷ ವ್ಯಕ್ತಪಡಿಸಿದರು.

ಕಲೆಗೆ ಗಡಿ ಇಲ್ಲ:ಶಾಂತಿಯಿಲ್ಲದೆ ಏನೂ ಆಗುವುದಿಲ್ಲ. ಇಂದು ಯುವಕರು ಜೆಹ್ಲಮ್ ನದಿಯ ದಡದಲ್ಲಿ ಐಸ್ ಕ್ರೀಂ ತಿಂದು ಆನಂದಿಸುವುದನ್ನು ಕಾಣಬಹುದು. ಅದೇ ಸಮಯದಲ್ಲಿ ಸಂಗೀತವನ್ನು ಕೇಳಿ ಆನಂದಿಸುತ್ತಾರೆ. ಕಲೆಗೆ ಗಡಿ ಇಲ್ಲ. ಜಮ್ಮು ಮತ್ತು ಕಾಶ್ಮೀರದ ಸಂಸ್ಕೃತಿಯು ಸ್ಥಳೀಯ ಪ್ರೇಕ್ಷಕರನ್ನು ಮಾತ್ರವಲ್ಲದೆ ವಿದೇಶದ ಕಲಾವಿದರನ್ನು ಆಕರ್ಷಿಸುತ್ತಿದೆ ಎಂದರು.

ಇದನ್ನೂ ಓದಿ:ಪಿವಿಆರ್​ ಐನಾಕ್ಸ್​ಗೆ 300 ಕೋಟಿ ರೂ.ಗೂ ಅಧಿಕ ನಷ್ಟ: 50 ಸ್ಕ್ರೀನ್​​ ಮುಚ್ಚುವ ನಿರ್ಧಾರ

ABOUT THE AUTHOR

...view details