ಕಾಶ್ಮೀರ: ಲಷ್ಕರ್-ಇ-ತೈಬಾದ ಮೂವರು ಉಗ್ರರನ್ನು ಭಾನುವಾರ ಪುಲ್ವಾಮದ ಡ್ರಬ್‌ಗಮ್ ಎಂಬಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಹೊಡೆದುರುಳಿಸಿದ್ದಾರೆ. ಈ ಕಾರ್ಯಾಚರಣೆ ಶನಿವಾರ ರಾತ್ರಿಯಿಂದ ಆರಂಭವಾಗಿದ್ದು ಸುಮಾರು 12 ಗಂಟೆಗಳ ನಡೆದಿದೆ. ಹತ್ಯೆಯಾದ ಮೂವರನ್ನು ಜುನೈದ್ ಶೀರ್‌ಗೋಜ್ರಿ, ಫಾಜಿಲ್ ನಜೀರ್ ಭಟ್ ಮತ್ತು ಇರ್ಫಾನ್ ಅಹ್ ಮಲಿಕ್ ಎಂದು ಪೊಲೀಸರು ಗುರುತಿಸಿದ್ದಾರೆ.
ಜಮ್ಮು ಕಾಶ್ಮೀರ: ಪೊಲೀಸ್ ಅಧಿಕಾರಿ ಕೊಂದ ಉಗ್ರ ಸೇರಿ ಎಲ್‌ಇಟಿಯ ಮೂವರ ಹತ್ಯೆ - ಕಾಶ್ಮೀರದಲ್ಲಿ ಉಗ್ರರು
ಜಮ್ಮು ಕಾಶ್ಮೀರ ಪೊಲೀಸರು ಮೂವರು ಉಗ್ರರನ್ನು ಎನ್‌ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ. ಈ ಉಗ್ರರು ಪಾಕಿಸ್ತಾನದ ಲಷ್ಕರ್-ಇ-ತೈಬಾ ಭಯೋತ್ಪಾದಕ ಸಂಘಟನೆಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು. ಈ ಪೈಕಿ ಓರ್ವ ಇತ್ತೀಚೆಗೆ, ಪೊಲೀಸ್ ಅಧಿಕಾರಿ ರಿಯಾಜ್ ಅಹಮದ್‌ರನ್ನು ಕೊಂದಿದ್ದ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದರು.
ಐಜಿಪಿ ವಿಜಯ್ ಕುಮಾರ್
ಈ ಕುರಿತು ಮಾಹಿತಿ ನೀಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್, 'ಹತ್ಯೆಯಾದ ಎಲ್ಲಾ ಉಗ್ರರು ಸ್ಥಳೀಯ ನಿವಾಸಿಗಳೇ ಆಗಿದ್ದು, ಲಷ್ಕರ್-ಇ-ತೈಬಾ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು. ಈ ಪೈಕಿ ಜುನೈದ್ ಶೀರ್‌ಗೋಜ್ರಿ ಮೇ 13ರಂದು ನಮ್ಮ ಸಹೋದ್ಯೋಗಿ ಅಧಿಕಾರಿ ರಿಯಾಜ್ ಅಹಮ್ಮದ್‌ರನ್ನು ಕೊಂದು ಹಾಕಿದ್ದ' ಎಂದು ಮಾಹಿತಿ ನೀಡಿದರು. ಉಗ್ರರಿಂದ ಸ್ಫೋಟಕಗಳು, ಎಕೆ 47 ರೈಫಲ್ಸ್, ಪಿಸ್ತೂಲ್ ಸೇರಿದಂತೆ ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರದ ಶೋಪಿಯಾನ್ನಲ್ಲಿ ಯೋಧರ ಗುಂಡೇಟಿಗೆ ಉಗ್ರ ಬಲಿ