ಜಮ್ಮು ಮತ್ತು ಕಾಶ್ಮೀರ :ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವಾಹನವೊಂದು ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭೀಕರ ಅಪಘಾತದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕಾರ್ಮಿಕರು ಖೇಲಾನಿಯಿಂದ ಮರ್ಮತ್ ಪ್ರದೇಶದ ತಮ್ಮ ಮನೆಗಳಿಗೆ ಹೋಗುತ್ತಿದ್ದಾಗ ದುರಂತ ಸಂಭವಿಸಿದೆ. ಶುಕ್ರವಾರ ರಾತ್ರಿ 10.40ರ ಸುಮಾರಿಗೆ ಹುಂಬಳ ಗ್ರಾಮದ ಬಳಿ ವಾಹನ ಅಪಘಾತಕ್ಕೀಡಾಗಿದೆ. ಅಪಘಾತದ ಬಳಿಕ ಸ್ಥಳೀಯ ಸ್ವಯಂಸೇವಕರು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಮೃತರನ್ನು ಮಣಿ ಕುಮಾರ್ (31), ಕಿರಣಜಿತ್ ಸಿಂಗ್ (40) ಮತ್ತು ಲಾಲ್ ಚಂದ್ (45) ಎಂದು ಗುರುತಿಸಲಾಗಿದೆ. ಇನ್ನು ಐವರು ಗಾಯಗಳನ್ನು ರಕ್ಷಿಸಲಾಗಿದ್ದು, ದೋಡಾದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಜುಲೈನಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಥಾನಾ ಮುಂಡಿ ಉಪವಿಭಾಗದ ಭಂಗೈ ರಸ್ತೆಯಲ್ಲಿ ಕಾರೊಂದು ಭೀಕರ ಅಪಘಾತಕ್ಕೀಡಾಗಿದ್ದು, ನಾಲ್ಕಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಗಾಯಾಳುಗಳನ್ನು ರಜೌರಿಯ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ :ಪಂಜಾಬ್‌ನಲ್ಲಿ ಕಾಲುವೆಗೆ ಬಿದ್ದ ಬಸ್ ; 8 ಪ್ರಯಾಣಿಕರು ಸಾವು
ಕಾಲುವೆಗೆ ಬಿದ್ದ ಬಸ್ :ಪಂಜಾಬ್ನ ಮುಕ್ತಸರ್ ಸಾಹಿಬ್ ಜಿಲ್ಲೆಯ ವಾರಿಂಗ್ ಗ್ರಾಮದ ಸಮೀಪ ಪ್ರಯಾಣಿಕರಿದ್ದ ಬಸ್ವೊಂದು ಕಾಲುವೆಗೆ ಬಿದ್ದ ಘಟನೆ ಸೆಪ್ಟೆಂಬರ್ 20 ರಂದು ನಡೆದಿತ್ತು. ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದರು. ಅಪಘಾತಕ್ಕೀಡಾದ ಬಸ್ ಮುಕ್ತಸರ್ ಸಾಹಿಬ್ ಎಂಬಲ್ಲಿಂದ ಮಧ್ಯಾಹ್ನ ಸುಮಾರು 1 ಗಂಟೆಗೆ ಕೊಟ್ಕಪುರಕ್ಕೆ ಹೊರಟಿತ್ತು. ಭಾರಿ ಮಳೆ ಮತ್ತು ಅತಿ ವೇಗ ದಿಂದಾಗಿ ನಿಯಂತ್ರಣ ಕಳೆದುಕೊಂಡು ಘಟನೆ ಜರುಗಿತ್ತು. ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿತ್ತು. ಕಬ್ಬಿಣದ ತಡೆಗೋಡೆ ಇದ್ದುದರಿಂದ ಬಸ್ನ ಅರ್ಧ ಭಾಗ ಕಾಲುವೆಗೆ ಉರುಳಿದೆ. ಉಳಿದರ್ಧ ಭಾಗ ಸೇತುವೆಯ ಮೇಲೆಯೇ ನೇತಾಡುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು. ಗಾಯಾಳು ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ :ಮಂಗಳೂರು: ನಿಂತಿದ್ದ ಬೈಕ್ಗೆ ವಿರುದ್ಧ ದಿಕ್ಕಿನಲ್ಲಿ ಬಂದು ಗುದ್ದಿದ ಬಸ್.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಇನ್ನು ಬ್ರೇಕ್ ವೈಫಲ್ಯದಿಂದಾಗಿ ಬಿಎಂಟಿಸಿ ಬಸ್ವೊಂದು ಡಿವೈಡರ್ಗೆ ಡಿಕ್ಕಿ ಹೊಡೆದ ಘಟನೆ ಕಳೆದ ಮೂರು ದಿನಗಳ ಹಿಂದೆ ನಡೆದಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ಬಸ್ನಲ್ಲಿ ಪ್ರಯಾಣಿಕರಿಲ್ಲದ ಪರಿಣಾಮ ದೊಡ್ಡ ಅನಾಹುತ ತಪ್ಪಿತ್ತು. ಕೆ.ಆರ್.ಮಾರ್ಕೆಟ್ನಿಂದ ಚಾಮರಾಜಪೇಟೆಗೆ ತೆರಳುತ್ತಿದ್ದ ಬಸ್, ಮಾರ್ಕೆಟ್ ಫ್ಲೈ ಓವರ್ ಮೇಲಿನಿಂದ ಬೆಳಗ್ಗೆ 7:10ರ ಸುಮಾರಿಗೆ ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು.
ಇದನ್ನೂ ಓದಿ :ಬ್ರೇಕ್ ಫೇಲ್ ಆಗಿ ಡಿವೈಡರ್ಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್