ಅಲಿರಾಜ್‌ಪುರ(ಮಧ್ಯಪ್ರದೇಶ):ಬಸ್ ಚಾಲಕ ನಿದ್ರೆಗೆ ಜಾರಿದ್ದರಿಂದ ಚಲಿಸುತ್ತಿದ್ದ ಬಸ್ಸೊಂದು ನದಿಗೆ ಉರುಳಿ ಬಿದ್ದು ಮೂವರು ಪ್ರಯಾಣಿಕರು ಸಾವನ್ನಪ್ಪಿ, 28 ಮಂದಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಅಲಿರಾಜ್ಪುರದಲ್ಲಿ ಭಾನುವಾರ ಜರುಗಿದೆ.
ದುರ್ಘಟನೆಯಲ್ಲಿ ಮೃತಪಟ್ಟವರನ್ನು ಒಂದು ವರ್ಷದ ಮಗು, ಕೈಲಾಶ್ ಮೇದಾ (48) ಮತ್ತು ಮೀರಾಬಾಯಿ (46) ಎಂದು ಗುರುತಿಸಲಾಗಿದೆ.
ಗುಜರಾತ್‌ನ ಛೋಟಾ ಉದೇಪುರ್‌ನಿಂದ ಮಧ್ಯಪ್ರದೇಶದ ಅಲಿರಾಜ್‌ಪುರಕ್ಕೆ ಬಸ್ ತೆರಳುತ್ತಿದ್ದಾಗ, ಜಿಲ್ಲಾ ಕೇಂದ್ರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಚಂದ್‌ಪುರ ಗ್ರಾಮದ ಬಳಿ ಬೆಳಗ್ಗೆ 6 ಗಂಟೆಗೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.