ಕರ್ನಾಟಕ

karnataka

ETV Bharat / bharat

ಪಾಕ್​ನ ಮೂವರು​ ನುಸುಳುಕೋರರನ್ನು ಹತ್ಯೆ ಮಾಡಿದ ಭಾರತೀಯ ಸೇನೆ: ನಾಲ್ವರು ಯೋಧರಿಗೆ ಗಾಯ - ಜಮ್ಮು ಕಾಶ್ಮೀರ ಸುದ್ದಿ

ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಮೂವರು ನುಸುಳುಕೋರರನ್ನು ಭಾರತೀಯ ಸೇನೆ ಗುಂಡಿಕ್ಕಿ ಹತ್ಯೆ ಮಾಡಿದೆ.

LoC
ಭಾರತೀಯ ಸೇನೆ

By

Published : Jan 20, 2021, 11:19 AM IST

ಜಮ್ಮು: ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಮೂವರು ನುಸುಳುಕೋರರನ್ನು ಭಾರತೀಯ ಸೇನೆ ಸದೆಬಡಿದಿದೆ. ಇನ್ನು ಕಾರ್ಯಾಚರಣೆ ವೇಳೆ ನಾಲ್ವರು ಯೋಧರಿಗೆ ಗಾಯಗಳಾಗಿದ್ದು, ಈ ಘಟನೆ ತಡರಾತ್ರಿ ಜಮ್ಮು ಜಿಲ್ಲೆಯ ಎಲ್​ಒಸಿಯಲ್ಲಿ ನಡೆದಿದೆ.

ಭಯೋತ್ಪಾದಕರ ಒಳನುಸುಳುವಿಕೆಗೆ ಅನುಕೂಲವಾಗುವಂತೆ ಪಾಕಿಸ್ತಾನ ಸೇನೆ ಮಂಗಳವಾರ ಸಂಜೆ ಎಲ್‌ಒಸಿಯ ಅಖ್ನೂರ್ ಸೆಕ್ಟರ್‌ನ ಖೌರ್ ಪ್ರದೇಶದಲ್ಲಿ ಭಾರಿ ಗುಂಡಿನ ದಾಳಿ ನಡೆದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

"ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ನಾಲ್ಕು ಸೇನಾ ಸೈನಿಕರು ಗಾಯಗೊಂಡಿದ್ದಾರೆ. ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ" ಎಂದು ಮೂಲಗಳು ತಿಳಿಸಿದೆ.

"ಇನ್ನು ಹತ್ಯೆಗೀಡಾದ ಭಯೋತ್ಪಾದಕರ ಶವಗಳು ಎಲ್‌ಒಸಿಯ ಪಾಕಿಸ್ತಾನದ ಗಡಿಯಲ್ಲಿವೆ. ಇವುಗಳನ್ನು ಪಾಕಿಸ್ತಾನದ ಪಡೆಗಳು ಇಲ್ಲಿಯವರೆಗೆ ತೆಗೆದುಕೊಂಡಿಲ್ಲ" ಎಂದು ಮೂಲ ತಿಳಿಸಿದೆ. 2021ರಲ್ಲಿ ಎಲ್‌ಒಸಿಯಲ್ಲಿ ಪಾಕಿಸ್ತಾನ ನಡೆಸಿದ ಮೊದಲ ಪ್ರಮುಖ ಕದನ ವಿರಾಮ ಉಲ್ಲಂಘನೆಯಾಗಿದೆ.

ABOUT THE AUTHOR

...view details