ಕರ್ನಾಟಕ

karnataka

ETV Bharat / bharat

ಅಕ್ರಮವಾಗಿ ರೆಮ್‌ಡೆಸಿವಿರ್‌ ಮಾರಾಟ, ವೈದ್ಯ ಸೇರಿದಂತೆ ಮೂವರ ಬಂಧನ - ವೈದ್ಯ ಸೇರಿದಂತೆ ಮೂವರನ್ನು ಚೆನ್ನೈನಲ್ಲಿ ಬಂಧನ

ಪಶ್ಚಿಮ ತಂಬರಂ ಪ್ರದೇಶದಲ್ಲಿ ಕಲಿಕಾರ್ಥ ವೈದ್ಯ ಮೊಹಮ್ಮದ್ ಇಮ್ರಾನ್ ಖಾನ್, ತಿರುವಣ್ಣಾಮಲೈ ಮೂಲದ ವಿಘ್ನೇಶ್, ರೆಮ್‌ಡೆಸಿವಿರ್‌ ಪ್ರತಿ ಬಾಟಲಿಗೆ 6,000 ರೂ. ಕೊಟ್ಟು ಖರೀದಿಸಿ ಬ್ಲಾಕ್ ಮಾರುಕಟ್ಟೆಯಲ್ಲಿ 20,000 ರೂ.ಗೆ ಮಾರಾಟ ಮಾಡಿದ್ದರು.

3-including-doctor-arrested
ಅಕ್ರಮವಾಗಿ ರೆಮ್‌ಡೆಸಿವಿರ್‌ ಮಾರಾಟ

By

Published : Apr 30, 2021, 5:38 PM IST

ಚೆನ್ನೈ:ಅಕ್ರಮವಾಗಿ ರೆಮ್‌ಡೆಸಿವಿರ್‌ ಮಾರಾಟ ಮಾಡಿದ ಆರೋಪದ ಮೇಲೆ ವೈದ್ಯ ಸೇರಿದಂತೆ ಮೂವರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ.

ಅಕ್ರಮವಾಗಿ ರೆಮ್‌ಡೆಸಿವಿರ್‌ ಮಾರಾಟ

ಓದಿ: 75 ಆಮ್ಲಜನಕ ಸಿಲಿಂಡರ್‌ಗಳನ್ನು ದೆಹಲಿ ಸರ್ಕಾರಕ್ಕೆ ಹಸ್ತಾಂತರಿಸಿದ ಡಿಆರ್‌ಡಿಒ

ಬಂಧಿತರಿಂದ ಒಟ್ಟು 17 ಬಾಟಲ್ ರೆಮ್‌ಡೆಸಿವಿರ್‌ ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ತಂಬರಂ ಪ್ರದೇಶದಲ್ಲಿ ಕಲಿಕಾರ್ಥ ವೈದ್ಯ ಮೊಹಮ್ಮದ್ ಇಮ್ರಾನ್ ಖಾನ್, ತಿರುವಣ್ಣಾಮಲೈ ಮೂಲದ ವಿಘ್ನೇಶ್, ರೆಮ್‌ಡೆಸಿವಿರ್‌ ಪ್ರತಿ ಬಾಟಲಿಗೆ 6,000 ರೂ. ಕೊಟ್ಟು ಖರೀದಿಸಿ ಬ್ಲಾಕ್ ಮಾರುಕಟ್ಟೆಯಲ್ಲಿ 20,000 ರೂ.ಗೆ ಮಾರಾಟ ಮಾಡಿದ್ದರು.

ಇಮ್ರಾನ್ ಖಾನ್ ಸ್ನೇಹಿತ ವಿಜಯ್ ಕೂಡ ಈ ಪ್ರಕರಣದ ಆರೋಪಿಯಾಗಿದ್ದಾನೆ. ಖಚಿತ ಮಾಹಿತಿ ಆಧರಿಸಿ, ಸಿಐಡಿ ಸಹಾಯದಿಂದ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮೂವರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details