ಕರ್ನಾಟಕ

karnataka

ETV Bharat / bharat

ಅಂಡಾಣು ದಾನ ಮಾಡುವಂತೆ 13ರ ಬಾಲಕಿಗೆ ತಾಯಿಯ ಕಿರುಕುಳ : ಮೂವರ ಬಂಧನ - 3 held for forcing girl to donate ovum to fertility hospital in TN

ಪೊಲೀಸರ ಪ್ರಕಾರ ಇಂದ್ರಾಣಿ ಎನ್ನುವವರು ಹಣಕ್ಕಾಗಿ ತನ್ನ ಮಗಳನ್ನು ಬಲವಂತವಾಗಿ ಅಂಡಾಣು ದಾನ ಮಾಡಲು ಕರೆದೊಯ್ದಿದ್ದರು ಎನ್ನಲಾಗಿದೆ. ಈ ವೇಳೆ ಆಸ್ಪತ್ರೆಯವರು ಇಂದ್ರಾಣಿ ಹಾಗೂ ಅವರ ಜೊತೆಗಿದ್ದ ಸೈಯದ್ ಅಲಿ ಮತ್ತು ಮತ್ತೊಬ್ಬ ಮಹಿಳೆಗೆ ಒಟ್ಟು 25,000 ರೂ. ನೀಡಿದ್ದಾರಂತೆ.

ಅಂಡಾಣು ದಾನ ಮಾಡುವಂತೆ 13 ರ ಬಾಲಕಿಗೆ ತಾಯಿಯ ಕಿರುಕುಳ : ಮೂವರ ಬಂಧನ
ಅಂಡಾಣು ದಾನ ಮಾಡುವಂತೆ 13 ರ ಬಾಲಕಿಗೆ ತಾಯಿಯ ಕಿರುಕುಳ : ಮೂವರ ಬಂಧನ

By

Published : Jun 3, 2022, 8:42 PM IST

ಈರೋಡ್ (ತಮಿಳುನಾಡು): ಇಲ್ಲಿನ ಖಾಸಗಿ ಫರ್ಟಿಲಿಟಿ ಆಸ್ಪತ್ರೆಯಲ್ಲಿ 13 ವರ್ಷದ ಬಾಲಕಿಗೆ ಎಂಟು ಸಲ ಅಂಡಾಣು ದಾನ ಮಾಡುವಂತೆ ಒತ್ತಾಯಿಸಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ ಇಂದ್ರಾಣಿ ಎನ್ನುವವಳು ಹಣಕ್ಕಾಗಿ ತನ್ನ ಮಗಳನ್ನು ಬಲವಂತವಾಗಿ ಅಂಡಾಣು ದಾನ ಮಾಡಲು ಕರೆದೊಯ್ದಿದ್ದರು ಎನ್ನಲಾಗಿದೆ. ಈ ವೇಳೆ, ಆಸ್ಪತ್ರೆಯವರು ಇಂದ್ರಾಣಿ ಹಾಗೂ ಅವರ ಜೊತೆಗಿದ್ದ ಸೈಯದ್ ಅಲಿ ಮತ್ತು ಮತ್ತೊಬ್ಬ ಮಹಿಳೆಗೆ ಒಟ್ಟು 25,000 ರೂ. ನೀಡಿದ್ದಾರಂತೆ.

ತಾಯಿಯ ಈ ರೀತಿಯ ಚಿತ್ರಹಿಂಸೆ ತಾಳಲಾರದೇ ಬಾಲಕಿ ಮೇ ತಿಂಗಳಿನಲ್ಲಿ ಸೇಲಂನಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿ ನಡೆದ ಘಟನೆಯನ್ನು ಹೇಳಿಕೊಂಡಿದ್ದರಂತೆ. ಇದರಿಂದ ಬೆಚ್ಚಿದ ಸಂಬಂಧಿಕರು ಇಂದು ಬೆಳಗ್ಗೆ ಇಂದ್ರಾಣಿ ಮತ್ತು ಇತರ ಇಬ್ಬರ ವಿರುದ್ಧ ಈರೋಡ್ ದಕ್ಷಿಣ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂತ್ರಸ್ತೆಯನ್ನು ಸರ್ಕಾರಿ ಪ್ರಧಾನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಆರೋಪಿಗಳು ಹಾಗೂ ಆಸ್ಪತ್ರೆ ಅಧಿಕಾರಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಲಿಫ್ಟ್‌ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕ

For All Latest Updates

TAGGED:

ABOUT THE AUTHOR

...view details