ಸಾಂಗ್ಲಿ(ಮಹಾರಾಷ್ಟ್ರ): ಒಂದು ಕೋಟಿ 65 ಲಕ್ಷ ಮೌಲ್ಯದ ಮೂರು ಚಿನ್ನದ ಬಿಸ್ಕಟ್ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂಗ್ಲಿಯ ಕವಲಾಪುರದಲ್ಲಿ ಶಂಕಿತ ಇಬ್ಬರು ಯುವಕರು ಓಡಾಡುತ್ತಿರುವ ಬಗ್ಗೆ ಸ್ಥಳೀಯ ಅಪರಾಧ ತನಿಖಾ ದಳಕ್ಕೆ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ರೋಹಿತ್ ಚವ್ಹಾಣ್ (27) ಮತ್ತು ಸಂತೋಷ್ ನಾಯ್ಕ (26) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.