ಕರ್ನಾಟಕ

karnataka

ETV Bharat / bharat

ಬಲು ಅಪರೂಪ ನಮ್​ ಜೋಡಿ: ಮೂರಡಿ ಯುವಕನಿಗೆ ಕೊನೆಗೂ ಸಿಕ್ಕಳು ಮದುವೆ ಹೆಣ್ಣು! - ಅಜೀಂ ಮನ್ಸೂರಿ

ಮೂರಡಿ ಎತ್ತರ ಉದ್ದವಿರುವ ಕಾರಣ ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ ಎಂದು ತನ್ನ ಗೋಳು ಹೊರಹಾಕಿದ್ದ ಅಜೀಂ ಎಂಬ ಯುವಕನಿಗೆ ಕೊನೆಗೂ ವಧು ಸಿಕ್ಕಿದ್ದಾಳೆ.

azim mansuri
azim mansuri

By

Published : Mar 19, 2021, 6:36 PM IST

Updated : Mar 20, 2021, 8:19 PM IST

ಶಾಮ್ಲಿ(ಉತ್ತರ ಪ್ರದೇಶ):ಕೇವಲ ಮೂರಡಿ ಎತ್ತರವಿದ್ದ ಕಾರಣ ತಮಗೆ ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಪತ್ರ ಬರೆದಿದ್ದ ಯುವಕನಿಗೆ ಕೊನೆಗೂ ವಧು ಸಿಕ್ಕಿದ್ದಾಳೆ.

ಮೂರಡಿ ಯುವಕನಿಗೆ ಕೊನೆಗೂ ಸಿಕ್ಳು ಮದುವೆ ಹೆಣ್ಣು

ಆರು ಮಂದಿ ಸಹೋದರರಲ್ಲಿ ಒಬ್ಬನಾಗಿದ್ದ ಅಜೀಂ ಕೇವಲ 3.2 ಅಡಿ ಇಂಚು ಎತ್ತರವಿದ್ದ ಕಾರಣ ಈವರೆಗೆ ಆತನ ಮದುವೆಯಾಗಲು ಯಾವ ಯುವತಿ ಕೂಡ ಮುಂದೆ ಬಂದಿರಲಿಲ್ಲ. ಇದರಿಂದ ಮನನೊಂದ ಆತ ಉತ್ತರಪ್ರದೇಶ ಮುಖ್ಯಮಂತ್ರಿ ಸೇರಿದಂತೆ ಅಲ್ಲಿನ ಉನ್ನತಾಧಿಕಾರಿಗಳಿಗೆ ಪತ್ರ ಬರೆದು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದ. ಜತೆಗೆ ವಿಡಿಯೋ ಹರಿಬಿಟ್ಟಿದ್ದರಿಂದ ಅದು ಎಲ್ಲೆಡೆ ವೈರಲ್​ ಆಗಿತ್ತು.

ಇದೀಗ ಗಾಜಿಯಾಬಾದ್​​ನಲ್ಲಿರುವ ರೆಹಾನಾ ಎಂಬ ಯುವತಿ ಯುವಕ ಅಜೀಂನನ್ನು ಮದುವೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಆಕೆ ಕೂಡ ಎರಡೂವರೆ ಅಡಿ ಎತ್ತರವಿದ್ದಾಳೆ. ಈಗಾಗಲೇ ಅಜೀಂ ಕುಟುಂಬವನ್ನು ಸಂಪರ್ಕ ಮಾಡಿರುವ ರೆಹಾನಾ ಕುಟುಂಬಸ್ಥರು ಮದುವೆ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಮೂರಡಿ ಎತ್ತರದ ಯುವಕನಿಗೆ ಮದುವೆಗೆ ಹುಡುಗಿ ಸಿಗ್ತಿಲ್ಲ: ಸಿಎಂ ಯೋಗಿಗೆ ಪತ್ರ ಬರೆದ ಅಜೀಂ

ಕೇವಲ ಎರಡೂವರೆ ಎತ್ತರ ಇರುವ ರೆಹಾನಾ ಈಗಾಗಲೇ 25 ವರ್ಷದವಳಾಗಿದ್ದು, ಇಲ್ಲಿಯವರೆಗೆ ವರ ಸಿಕ್ಕಿಲ್ಲ. ಇದೀಗ ಆಜೀಂ ವಿಡಿಯೋ ವೈರಲ್​ ಆಗುತ್ತಿದ್ದಂತೆ ಮದುವೆ ಮಾಡಿಸುವ ಉದ್ದೇಶ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಕೈರಾನಾದಲ್ಲಿ ಅಝೀಂ ಮನ್ಸೂರ್ ಅಂಗಡಿಯನ್ನು ಇಟ್ಟುಕೊಂಡಿದ್ದು, ಮುಂದಿನ ರಂಜಾನ್ ಒಳಗೆ ಮದುವೆಯಾಗಬೇಕೆಂಬ ಅಭಿಲಾಷೆ ಹೊಂದಿದ್ದಾನೆ. ಮದುವೆಯಾದರೆ ಪತ್ನಿಯನ್ನು ಹನಿಮೂನ್​ಗೆ ಗೋವಾ, ಕುಲ್ಲು-ಮನಾಲಿ, ಶಿಮ್ಲಾಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ.

ರೆಹಾನಾ ಕುಟುಂಬ
Last Updated : Mar 20, 2021, 8:19 PM IST

ABOUT THE AUTHOR

...view details