ಐಜ್ವಾಲ್ (ಮಿಜೋರಾಂ):ಮಿಜೋರಾಂನ ಐಜ್ವಾಲ್‌ನಲ್ಲಿ ಶುಕ್ರವಾರ ತಡರಾತ್ರಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು (NCS) ಮಾಹಿತಿ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎನ್ಸಿಎಸ್, ಭೂಮಿಯ 10 ಕಿ.ಮೀ. ಆಳದಲ್ಲಿ ಕಂಪನ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 3.7ರ ತೀವ್ರತೆ ದಾಖಲಾಗಿದೆ. ರಾತ್ರಿ 12.49ರ ವೇಳೆಗೆ ಭೂಮಿಯು ಕಂಪಿಸಿದೆ ಎಂದು ತಿಳಿಸಿದೆ.