ಪಾಲಿ (ರಾಜಸ್ಥಾನ):ಮದುವೆ ಹಾಲ್ವೊಂದರ ಒಳಚರಂಡಿ ಚೇಂಬರ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಮೂವರು ಯುವಕರು ಸಾವಿಗೀಡಾಗಿರುವ ಘಟನೆ ರಾಜಸ್ಥಾನದ ಪಾಲಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಸ್ವಚ್ಛ ಮಾಡುತ್ತಿದ್ದ ವೇಳೆ ವಿಷಾನಿಲದಿಂದ ಯುವಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಯುವಕನೊಬ್ಬ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿಯ ಮೇರೆಗೆ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಂಗಾರ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಮೂವರು ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ.
ಪಾಲಿ ನಗರದ ಸೆಂಚುರಿಯನ್ ಮ್ಯಾರೇಜ್ ಗಾರ್ಡನ್‌ನಲ್ಲಿ ತ್ಯಾಜ್ಯ ಸುರಿಯಲು ಬಸ್ ನಿಲ್ದಾಣದ ಬಳಿ ಒಳಚರಂಡಿ ಚೇಂಬರ್ (ತೊಟ್ಟಿ) ನಿರ್ಮಿಸಲಾಗಿದೆ. ಅದು ಭರ್ತಿಯಾಗಿದ್ದು ಶುಕ್ರವಾರ ರಾತ್ರಿ ಮದುವೆ ಹಾಲ್ ನಿರ್ವಾಹಕರು ಸುರಕ್ಷತಾ ಪರಿಕರಗಳಿಲ್ಲದೆ ನಾಲ್ವರು ಕಾರ್ಮಿಕರನ್ನು ಕರೆಯಿಸಿಕೊಂಡು ಸ್ವಚ್ಛ ಮಾಡಲು ತಿಳಿಸಿದ್ದಾರೆ ಎನ್ನಲಾಗಿದೆ.
ಕಾರ್ಮಿಕರು ತೊಟ್ಟಿಗೆ ಇಳಿದು ಸ್ಚಚ್ಛತೆಗೆ ಇಳಿದಾಗ ಒಳಚರಂಡಿ ಚೇಂಬರ್‌ನಲ್ಲಿ ತ್ಯಾಜ್ಯದಿಂದ ಉತ್ಪತ್ತಿಯಾದ ವಿಷಕಾರಿ ಅನಿಲದಿಂದ ದುರಂತ ಸಂಭವಿಸಿದೆ. ಉಸಿರಾಟದ ತೊಂದರೆಯಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಸಿಒ ಸಿಟಿ ಅನಿಲ್ ಸರಣ್, ಕೊತ್ವಾಲ್ ರವೀಂದ್ರ ಸಿಂಗ್, ಕೈಗಾರಿಕಾ ಠಾಣೆ ಪ್ರಭಾರಿ ಹಿಂಗ್ಲಾಜ್ ದಾನ್ ಚರಣ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ತಜ್ಞರ ನೆರವಿನೊಂದಿಗೆ ಪೊಲೀಸರು ಮೂವರ ಮೃತದೇಹಗಳನ್ನು ಹೊರತೆಗೆದು ಬಂಗಾರ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ. ವಾಲ್ಮೀಕಿ ಬಸ್ತಿ ನಿವಾಸಿ ಮನೀಶ್ ಹನ್ಸ್ ಪುತ್ರ ಚೆನಾರಾಮ್, ಕರಣ್ ಪುತ್ರ ಮುಖೇಶ್ ವಾಲ್ಮೀಕಿ ಮತ್ತು ಲಾಡು ಅಲಿಯಾಸ್ ಭರತ್ ಸಾವಿಗೀಡಾದವರು ಎಂದು ಸಿಒ ಸಿಟಿ ಅನಿಲ್ ಸರನ್ ತಿಳಿಸಿದ್ದಾರೆ. ಇನ್ನೊಬ್ಬ ಯುವಕ ಹೃತಿಕ್ಗೆ ಬಂಗಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈಜಲು ಹೋಗಿದ್ದ ಐವರು ಹುಡುಗರು ನೀರುಪಾಲು:ಬಿಹಾರದ ಗಂಡಕ್ ನದಿಯಲ್ಲಿ ಈಜಲು ಹೋಗಿದ್ದ ಐವರು ಹುಡುಗರು ನೀರುಪಾಲಾಗಿರುವ ದುರ್ಘಟನೆ ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ವಿಷ್ಣುಪುರ ಎಂಬಲ್ಲಿ ಜರುಗಿದೆ. ಒಟ್ಟು 9 ಮಂದಿ ಹುಡುಗರು ಈಜಲು ಹೋಗಿದ್ದರು. ಈ ಪೈಕಿ ನಾಲ್ವರು ಹೊರಗೆ ಬಂದಿದ್ದಾರೆ. ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇದನ್ನೂಓದಿ:ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ: ಸ್ಥಳದಲ್ಲೇ ನವವಿವಾಹಿತೆ ಸಾವು..