ಸುಲ್ತಾನ್‌ಪುರ (ಉತ್ತರ ಪ್ರದೇಶ):ಓರ್ವ ಮಹಿಳೆ ಹಾಗೂ ಆಕೆಯ 21 ವರ್ಷದ ಮಗಳನ್ನು ಕೊಲೆಗೈದ ಪ್ರಕರಣದಲ್ಲಿ ಸುಲ್ತಾನ್‌ಪುರ ಪೊಲೀಸರು ಟೆಂಟ್ ಹೌಸ್ ಮಾಲೀಕ ಮತ್ತು ಆತನ ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ. ಬಂಧಿತ ಸಹೋದರರನ್ನು ಇರ್ಫಾನ್ (ಟೆಂಟ್ ಹೌಸ್ ಮಾಲೀಕ), ಸದನ್ ಮತ್ತು ಶೆಹಜಾದ್ ಎಂದು ಗುರುತಿಸಲಾಗಿದೆ. ಶಕುಂತಲಾ (40) ಹಾಗೂ ಪುತ್ರಿ ವಿಜಯಲಕ್ಷ್ಮಿ ಹತ್ಯೆಯಾದವರು.
ಮೃತ ಮಹಿಳೆ ಶಕುಂತಲಾ ಪತಿ ತರಕಾರಿ ಮಾರಾಟಗಾರರಾಗಿದ್ದಾರೆ. ದೈನಂದಿನ ಅಗತ್ಯಗಳನ್ನು ಪೂರೈಸುವುದು ಈ ಬಡ ಕುಟುಂಬಕ್ಕೆ ಕಷ್ಟಕರವಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಇರ್ಫಾನ್, ಮಹಿಳೆಯ ಜೊತೆ ಸಲುಗೆ ಬೆಳೆಸಿಕೊಂಡು, ಆಕೆಗಾಗಿ ಸಾಕಷ್ಟು ಹಣ ವ್ಯಯಿಸುತ್ತಿದ್ದ. ತನ್ನ ಐಷಾರಾಮಿ ಕಾರಿನಲ್ಲಿ ಕರೆದುಕೊಂಡು ಹೋಗುವುದು ಇತ್ಯಾದಿ ಮಾಡುತ್ತಿದ್ದ. ಆದರೆ ಒಂದು ಬಾರಿ ಆಕೆಯ 21 ವರ್ಷದ ಮಗಳನ್ನು ಭೇಟಿಯಾದ ಇರ್ಫಾನ್, ಮಗಳನ್ನೂ ತನ್ನೊಂದಿಗೆ ಇರಲು ಅನುಮತಿ ನೀಡುವಂತೆ ಕೇಳಿಕೊಂಡಿದ್ದಾನೆ. ಈ ಪ್ರಸ್ತಾಪವನ್ನು ತಾಯಿ ತಿರಸ್ಕರಿಸಿದ್ದಳು. ಈ ವಿಷಯಕ್ಕೆ ಶಕುಂತಲಾ ಹಾಗೂ ಇರ್ಫಾನ್ ನಡುವಿನ ಸಂಬಂಧ ಹದಗೆಟ್ಟು ಜಗಳ ಪ್ರಾರಂಭವಾಗಿದೆ.
ಆಗ ಇರ್ಫಾನ್ ತನ್ನ ಇಬ್ಬರು ಸಹೋದರರೊಂದಿಗೆ ಸೇರಿ ಮಹಿಳೆ ಹಾಗೂ ಆಕೆಯ ಮಗಳನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ. ಜೂನ್ 29ರಂದು ಇರ್ಫಾನ್ ಇಬ್ಬರು ಸಹೋದರರು ಮಹಿಳೆಯ ಪತಿ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ನುಗ್ಗಿದ್ದಾರೆ. ಸದನ್‌ಗೆ ಮನೆ ಬಾಗಲು ಬಳಿ ಕಾವಲು ಕಾಯಲು ಹೇಳಿ, ಇಬ್ಬರು ಮನೆ ಒಳಗೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.