ಅಜ್ಮೀರ್ (ರಾಜಸ್ಥಾನ): ಇಲ್ಲಿನ ರಾಮಗಂಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಮೂವರು ಭಿಕ್ಷುಕರನ್ನು ಥಳಿಸುವ ವಿಡಿಯೋ ವೈರಲ್ ಆಗಿದೆ. ಪೋಲಿಸರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದ ಆಧಾರದ ಮೇಲೆ ಭಿಕ್ಷುಕರ ವಿರುದ್ಧ ಕೈ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ.
ರಾಮಗಂಜ್ ಪೊಲೀಸ್ ಠಾಣೆಯ ಪ್ರಭಾರಿ ಸತೇಂದ್ರ ನೇಗಿ ಅವರಿಗೆ ಆಗಸ್ಟ್ 20 ರಂದು ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮದ ಮೂಲಕ ದೊರೆತಿದೆ. ಆ ವಿಡಿಯೋ ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ನಗರದ್ದು ಎಂದು ಅವರಿಗೆ ಗೊತ್ತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವನ್ನು ತನಿಖೆ ಮಾಡಿದ್ದಾರೆ ಮತ್ತು ಅದೇ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಲಲಿತ್ ಶರ್ಮಾ ಚಂದ್ರವರ್ಧೈ ನಗರದ ನಿವಾಸಿಯನ್ನು ಬಂಧಿಸಿರುವುದಾಗಿ ಸತ್ಯೇಂದ್ರ ನೇಗಿ ತಿಳಿಸಿದ್ದಾರೆ.