ಮುಂಬೈ: ಗುರುಗ್ರಾಮದಲ್ಲಿರುವ ಕಿಂಗ್‌ಡಮ್ ಆಫ್ ಡ್ರೀಮ್ಸ್ ಅನ್ನು ಒಳಗೊಂಡಿರುವ 'ಗ್ರೇಟ್ ಇಂಡಿಯನ್ ತಮಾಶಾ ಕಂಪನಿ'ಯ ಆಸ್ತಿಗಳ ಮಾರಾಟಕ್ಕಾಗಿ ಬ್ಯಾಂಕ್ ಇ-ಹರಾಜು ಪ್ರಾರಂಭಿಸಿದೆ. ಅಷ್ಟಕ್ಕೂ ಇದಕ್ಕೆ ಕಾರಣವೇನು ಗೊತ್ತೇ?
'ನೌಟಂಕಿ' ಕಂಪನಿಗೆ 'ತಮಾಶಾ' ಕಂಪೆನಿಯ ಗ್ಯಾರಂಟಿ ಮೇಲೆ ಬ್ಯಾಂಕ್‌ಗಳು 141 ಕೋಟಿ ರೂ. ಸಾಲ ನೀಡಿವೆ. ಬ್ಯಾಂಕುಗಳು ಸೇರಿಕೊಟ್ಟಿರುವ ಈ ಸಾಲ ಸುಸ್ತಿಯಾಗಿದ್ದು, ಸಾಲಗಾರರ ಆಸ್ತಿ ಹರಾಜು ಹಾಕುವ ಬಗ್ಗೆ ಐಡಿಬಿಐ ಬ್ಯಾಂಕ್ ಜಾಹೀರಾತು ಹೊರಡಿಸಿದೆ. ಈ ಜಾಹೀರಾತಿನಲ್ಲಿರುವ ಸಾಲಗಾರ ಹಾಗೂ ಜಾಮೀನುದಾರ ಕಂಪನಿಗಳ ಹೆಸರು ಭಾರಿ ಚರ್ಚೆಗೆ ಕಾರಣವಾಗಿದೆ.
ಐಡಿಬಿಐ ಬ್ಯಾಂಕ್ ಲಿಮಿಟೆಡ್ (ರೂ. 92.69 ಕೋಟಿ), ಬ್ಯಾಂಕ್ ಆಫ್ ಬರೋಡಾ (ರೂ. 49.23 ಕೋಟಿ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ (ರೂ. 6.27 ಕೋಟಿ) ಸಾಲ ನೀಡಿವೆ. ಸಾಲಗಾರ ಕಂಪನಿಯಾಗಿರುವ ಗ್ರೇಟ್ ಇಂಡಿಯನ್ ನೌಟಂಕಿ ಕಂಪನಿ ಪ್ರೈ. ಲಿಮಿಟೆಡ್ ಕಂಪನಿಯು ಗ್ರೇಟ್ ಇಂಡಿಯನ್ ತಮಾಶಾ ಕಂಪನಿ ಪ್ರೈ ಲಿಮಿಟೆಡ್ ಕಂಪನಿಗೆ ಸೇರಿರುವ ಮಡಿಕೇರಿಯಲ್ಲಿರುವ ಆಸ್ತಿ ಖರೀದಿಗೆ ಸಾಲ ಪಡೆದಿತ್ತು. ಈ ಸಾಲದ ಜಾಮೀನುದಾರಾಗಿ ಗ್ರೇಟ್ ಇಂಡಿಯನ್ ತಮಾಶಾ ಕಂಪನಿ ಪ್ರೈ ಲಿಮಿಟೆಡ್ ಸಹಿ ಮಾಡಿದೆ.