ಗುವಾಹಟಿ(ಅಸ್ಸೋಂ):ನ್ಯಾಯಾಲಯಗಳು ಆಗಾಗ ಕುತೂಹಲಕಾರಿ ತೀರ್ಪುಗಳನ್ನು ನೀಡುತ್ತಿರುತ್ತವೆ. ಈಗ ಅಸ್ಸೋಂನ ಗುವಾಹಟಿ ಹೈಕೋರ್ಟ್ ಕೂಡಾ ಇಂತಹದ್ದೇ ಒಂದು ಕುತೂಹಲಕಾರಿ ತೀರ್ಪು ನೀಡಿದೆ.
ಮುಸ್ಲಿಂ ಧರ್ಮದ ವ್ಯಕ್ತಿ, ಹಿಂದೂ ಧರ್ಮದ ಮಹಿಳೆಯನ್ನು ಎರಡನೇ ವಿವಾಹವಾದರೆ, ಅದು ಅಸಿಂಧು ಎಂಬ ತೀರ್ಪನ್ನು ಹೈಕೋರ್ಟ್ ನೀಡಿದೆ. ವಿಶೇಷ ವಿವಾಹ ತಿದ್ದುಪಡಿ ಕಾಯ್ದೆಯಡಿ ಕೋರ್ಟ್ ಈ ತೀರ್ಪು ನೀಡಿದೆ.
ತೀರ್ಪಿನ ಹಿನ್ನೆಲೆ:ಶಹಬುದ್ದೀನ್ ಅಹ್ಮದ್ ಎಂಬಾತ ಮೊದಲ ಪತ್ನಿಯನ್ನು ತೊರೆದುದೀಪಮನಿ ಕಲಿತಾ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದನು. ಆಕೆಗೆ 12 ವರ್ಷದ ಮಗನಿದ್ದು, 2017ರ ಜುಲೈನಲ್ಲಿ ಆಕೆಯ ಪತಿ ಶಹಬುದ್ದೀನ್ ಅಹ್ಮದ್ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದನು.
ಶಹಬುದ್ದೀನ್ ಕಾಮರೂಪ ಜಿಲ್ಲೆಯ ಡೆಪ್ಯುಟಿ ಕಮೀಷನರ್ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದನು. ಶಹಬುದ್ದೀನ್ ಮೃತಪಟ್ಟ ನಂತರ ದೀಪಮನಿ ಕಲಿತಾ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಳು. ಆದರೆ, ಸರ್ಕಾರದ ಪ್ರಾಧಿಕಾರಗಳು ಆಕೆಯ ಅರ್ಜಿಯನ್ನು ತಿರಸ್ಕರಿಸಿದ್ದವು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಕೆ ಸಂವಿಧಾನದ 226ನೇ ವಿಧಿಯ ಅನ್ವಯ ಹೈಕೋರ್ಟ್ಗೆ ರಿಟ್ ಅರ್ಜಿಯನ್ನು ಆಕೆ ಸಲ್ಲಿಸಿದ್ದಳು. ಈ ಅರ್ಜಿಯ ವಿಚಾರಣೆ ನಡೆಸಿದ ಗುವಾಹಟಿ ಹೈಕೋರ್ಟ್ ನ್ಯಾಯಮೂರ್ತಿ ನ್ಯಾ.ಕಲ್ಯಾಣ್ ರೈ ಸುರಾನಾ ಈ ತೀರ್ಪನ್ನು ನೀಡಿದ್ದಾರೆ.