ನವದೆಹಲಿ: ದೇಶದಲ್ಲಿ 2017 ಮತ್ತು 2021ರ ನಡುವಿನ ಐದು ವರ್ಷಗಳ ಅವಧಿಯಲ್ಲಿ 2,900ಕ್ಕೂ ಹೆಚ್ಚು ಕೋಮು ಅಥವಾ ಧಾರ್ಮಿಕ ಗಲಭೆ ಪ್ರಕರಣಗಳು ದಾಖಲಾಗಿವೆ. ಗುಂಪು ಹತ್ಯೆಯ ಬಗ್ಗೆ ಸರ್ಕಾರದ ಬಳಿ ಯಾವುದೇ ಪ್ರತ್ಯೇಕ ಮಾಹಿತಿ ಇಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದ್ದಾರೆ.
ಬುಧವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಸಚಿವರು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಮಾಹಿತಿ ಉಲ್ಲೇಖಿಸಿ ಕೋಮು ಗಲಭೆ ಪ್ರಕರಣಗಳ ಸಂಖ್ಯೆ ಒದಗಿಸಿದ್ದಾರೆ. 2021ರಲ್ಲಿ 378 ಕೋಮು ಗಲಭೆ ಪ್ರಕರಣಗಳು ವರದಿಯಾಗಿವೆ. 2020ರಲ್ಲಿ 857, 2019ರಲ್ಲಿ 438 ಮತ್ತು 2018ರಲ್ಲಿ 512 ಹಾಗೂ 2017ರಲ್ಲಿ 723 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.