ನವದೆಹಲಿ :ಭಾರತ ಮತ್ತು ಸಿಂಗಾಪುರದ ನಡುವೆ ಸೆಪ್ಟೆಂಬರ್ 2ರಂದು ಆರಂಭವಾಗಿದ್ದ ಸಿಂಗಾಪುರ-ಇಂಡಿಯಾ ಸಾಗರೋತ್ತರ ದ್ವಿಪಕ್ಷೀಯ ಸಮರಾಭ್ಯಾಸದ (SIMBEX) 28ನೇ ಆವೃತ್ತಿ ಇಂದು ಸಮಾರೋಪಗೊಂಡಿದೆ.
ಭಾರತೀಯ ನೌಕಾಪಡೆಯು ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ಐಎನ್ಎಸ್ ರಣವಿಜಯ್, ಐಎನ್ಎಸ್ ಕಿಲ್ತಾನ್ ಮತ್ತು ಐಎನ್ಎಸ್ ಕೋರಾ ಮತ್ತು ಪಿ8ಐ ಲಾಂಗ್ ರೇಂಜ್ ಮ್ಯಾರಿಟೈಮ್ ಪೆಟ್ರೋಲ್ ಏರ್ಕ್ರಾಫ್ಟ್ ಈ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದವು.
ಸಿಂಗಾಪುರದಿಂದ ಫರ್ಮಿಡಬಲ್ ಕ್ಲಾಸ್ ಫ್ರಿಗೇಟ್, ಎಸ್-70ಬಿ ನೌಕಾ ಹೆಲಿಕಾಪ್ಟರ್, ಆರ್ಚರ್ ಕ್ಲಾಸ್ ಜಲಾಂತರ್ಗಾಮಿ ನೌಕೆ, ನಾಲ್ಕು ಎಫ್-16 ಫೈಟರ್ ಏರ್ ಕ್ರಾಫ್ಟ್ಗಳು ಮುಂತಾದವುಗಳು ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದವು.