ತಿರುವಣ್ಣಾಮಲೈ(ತಮಿಳುನಾಡು):ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಜನಸಾಮಾನ್ಯರೊಂದಿಗೆ ಅನೇಕ ವೈದ್ಯರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ 28 ವರ್ಷದ ಗರ್ಭಿಣಿ ವೈದ್ಯೆ ಡೆಡ್ಲಿ ಸೋಂಕಿಗೆ ಬಲಿಯಾಗಿದ್ದಾರೆ.
ಕೊರೊನಾ ಸೋಂಕಿಗೊಳಗಾಗಿದ್ದ 28 ವರ್ಷದ ಕಾರ್ತಿಕಾ ಉಸಿರಾಟದ ತೊಂದರೆಗೊಳಗಾಗಿದ್ದರು. ಚಿಕಿತ್ಸೆಗೋಸ್ಕರ ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸಿದ ಕಾರಣ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.