ನವದೆಹಲಿ: ಅಖಿಲ ಭಾರತ ವೈದ್ಯಕೀಯ ಪ್ರವೇಶಾತಿಯಲ್ಲಿ ಒಬಿಸಿಗೆ ಶೇ 27 ರಷ್ಟು ಮೀಸಲಾತಿ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಆದೇಶ ಜಾರಿಗೆ ಬರಲಿದೆ.
ಪ್ರತಿವರ್ಷ ಎಂಬಿಬಿಎಸ್‌ನಲ್ಲಿ ಸುಮಾರು 1,500 ಒಬಿಸಿ ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ಪದವಿ 2,500 ಒಬಿಸಿ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಒಬಿಸಿಗೆ ಶೇ 27 ರಷ್ಟು ಮೀಸಲಾತಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ 10 ರಷ್ಟು ಕೋಟಾವನ್ನು ಸರ್ಕಾರ ಘೋಷಿಸಿದೆ. ಹೊಸ ಮೀಸಲಾತಿ ನಿಬಂಧನೆಯನ್ನು ಈ ವರ್ಷದ ಪ್ರವೇಶದಲ್ಲೂ ಜಾರಿಗೆ ತರಲಾಗುವುದು ಎಂದು ಸರ್ಕಾರ ತಿಳಿಸಿದೆ. ದಂತ ಸೇರಿದಂತೆ ಎಲ್ಲಾ ಪದವಿಪೂರ್ವ ಹಾಗೂ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳು 2021-22 ರಿಂದ ಒಬಿಸಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ಅನ್ವಯಿಸಲಿದೆ.
ಎಂಬಿಬಿಎಸ್‌ನಲ್ಲಿ ಸುಮಾರು 1,500 ಒಬಿಸಿ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವೀಧರರಾದ 2,500 ವಿದ್ಯಾರ್ಥಿಗಳು ಈ ಮೀಸಲಾತಿಯಿಂದ ಪ್ರತಿವರ್ಷ ಪ್ರಯೋಜನ ಪಡೆಯಲಿದ್ದಾರೆ. ಇದು ಪ್ರತಿವರ್ಷ ನಮ್ಮ ಸಾವಿರಾರು ಯುವಕರಿಗೆ ಉತ್ತಮ ಅವಕಾಶಗಳನ್ನು ಪಡೆಯಲು ಮತ್ತು ನಮ್ಮ ದೇಶದಲ್ಲಿ ಸಾಮಾಜಿಕ ನ್ಯಾಯದ ಹೊಸ ಮಾದರಿಯನ್ನು ಸೃಷ್ಟಿಸಲು ಅಪಾರ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶಾದ್ಯಂತದ ಒಬಿಸಿ ವಿದ್ಯಾರ್ಥಿಗಳು ಈಗ ಯಾವುದೇ ರಾಜ್ಯದಲ್ಲಿ ಹುದ್ದೆಗಳಿಗಾಗಿ ಸ್ಪರ್ಧಿಸಲು ಎಐಕ್ಯು ಯೋಜನೆಯಲ್ಲಿ ಈ ಮೀಸಲಾತಿಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಕೇಂದ್ರದ ಯೋಜನೆಯಾಗಿರುವುದರಿಂದ, ಈ ಮೀಸಲಾತಿಗಾಗಿ ಒಬಿಸಿಗಳ ಕೇಂದ್ರ ಪಟ್ಟಿಯನ್ನು ಬಳಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.