ಸಿಲ್ಚಾರ್(ಅಸ್ಸೋಂ):ಅಕ್ರಮ ಪ್ರವೇಶಕ್ಕೆ ಕಡಿವಾಣ ಹಾಕಿದ್ದರೂ ಉದ್ಯೋಗ ಅರಸಿ ಅಸ್ಸೋಂ ಪ್ರವೇಶಿಸಿದ್ದ ಮ್ಯಾನ್ಮಾರ್ನ 26 ರೋಗಿಂಗ್ಯಾಗಳನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೂರು ಕುಟುಂಬಗಳಿಗೆ ಸೇರಿದ 26 ರೋಹಿಂಗ್ಯಾಗಳು ಯಾವುದೇ ದಾಖಲೆ ಇಲ್ಲದೇ ಮೂರು ವಾಹನಗಳಲ್ಲಿ ಆಗಮಿಸಿದ್ದರು. ಇವರು ಮೊದಲು ಜಮ್ಮುವಿನಿಂದ ಅಸ್ಸೋಂಗೆ ತೆರಳಲು ಕಾಮಾಖ್ಯ ರೈಲು ನಿಲ್ದಾಣಕ್ಕೆ ಹೊರಟಿದ್ದಾಗ ಪೊಲೀಸರು ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ, ಯಾವುದೇ ದಾಖಲೆ ಇಲ್ಲದೇ ಅಕ್ರಮವಾಗಿ ದೇಶ ಪ್ರವೇಶಿಸಿದ್ದಕ್ಕಾಗಿ ರೋಹಿಂಗ್ಯಾಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಬಂಧಿತ ವ್ಯಕ್ತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದರಲ್ಲಿ 6 ಪುರುಷರು ಮತ್ತು 6 ಮಹಿಳೆಯರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ 7 ಮಕ್ಕಳನ್ನು ಮಹಿಳೆಯ ಜೊತೆಗೆ ಇರಲು ಅನುವು ಮಾಡಿಕೊಡಲಾಗಿದೆ. ಇವರನ್ನು ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.