ಕರ್ನಾಟಕ

karnataka

ETV Bharat / bharat

ಮುಂಬೈ ದಾಳಿಗೆ 13 ವರ್ಷ... 26/11 ಉಗ್ರರ ಅಟ್ಟಹಾಸದ ಕರಾಳ ನೆನಪು - ಮುಂಬೈ ತಾಜ್​​​​​ ಹೋಟೆಲ್​ ಮೇಲಿ ಉಗ್ರರ ದಾಳಿ

2008ರಲ್ಲಿ ಸಂಭವಿಸಿದ್ದ ಮುಂಬೈ ಉಗ್ರರ ದಾಳಿ ಭಾರತೀಯ ಇತಿಹಾಸ ಪುಟದಲ್ಲಿ ಮರೆಯಲಾಗದ ಕಹಿ ಘಟನೆಯಾಗಿ ಅಚ್ಚಾಗಿದೆ. 160 ಅಮಾಯಕರ ಬಲಿ ಪಡೆದಿದ್ದ ಉಗ್ರರು ಮುಂಬೈ ನಗರಿಯನ್ನು 4 ದಿನಗಳ ಕಾಲ ಅಕ್ಷರಶಃ ನರಕ ಮಾಡಿದ್ದರು. 18 ಮಂದಿ ಭದ್ರತಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದರು. ಆ ಕರಾಳ ದಿನಕ್ಕಿಂದು 13 ವರ್ಷ ತುಂಬಿದೆ.

26/11 Attack
ಮುಂಬೈ ದಾಳಿ

By

Published : Nov 26, 2021, 7:55 AM IST

Updated : Nov 26, 2021, 8:33 AM IST

ಮುಂಬೈ:ಭಾರತ ನೆಲದೊಳಗೆ ನಡೆದ ಭೀಕರ ಉಗ್ರರ ಅಟ್ಟಹಾಸದಲ್ಲಿ ಮುಂಬೈ ತಾಜ್​​​​​ ಹೋಟೆಲ್​ ಮೇಲೆ ನಡೆದಿದ್ದ ಘಟನೆ ಘೋರ ಅಧ್ಯಾಯವಾಗಿ ಉಳಿದು ಬಿಟ್ಟಿದೆ. ಘಟನೆ ನಡೆದು ಇಂದಿಗೆ 13 ವರ್ಷ ಕಳೆದರೂ ಅದರ ಭೀಕರತೆ ಮಾತ್ರ ಇನ್ನೂ ಕಣ್ಣು ಮುಂದೆಯೇ ಇದೆ. ಸರಿಯಾಗಿ 12 ವರ್ಷದ ಹಿಂದೆ 2008ರ ನವೆಂಬರ್​​ 26ರ ರಾತ್ರಿ ವೇಳೆಗೆ ಮುಂಬೈ ನಡುಗಿ ಹೋಗಿತ್ತು.

ಕೈಯಲ್ಲಿ ಮದ್ದುಗುಂಡು, ಬಂದೂಕು ಹಿಡಿದಿದ್ದ 10 ಮಂದಿ ಲಷ್ಕರ್-ಎ-ತೋಯ್ಬಾ ಸಂಘಟನೆಯ ಉಗ್ರರು ವಾಣಿಜ್ಯ ನಗರಿಯ ರಕ್ತದೋಕುಳಿಗೆ ಸಮುದ್ರ ದಾಟಿ ಬಂದಿದ್ದರು. ಈ ವೇಳೆ ದಾರಿಯಲ್ಲಿ ಸಿಕ್ಕವರಿಗೆಲ್ಲ ಗುಂಡು ಹಾರಿಸಿದ್ದ ಭಯೋತ್ಪಾದಕರು 166 ಮಂದಿಯ ಜೀವ ತೆಗೆದಿದ್ದರು. ಅಲ್ಲದೆ ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದರು. ಈ ಕಹಿ ಘಟನೆಯ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಘಟನೆಯಲ್ಲಿ ಮಡಿದವರಿಗಾಗಿ ಶ್ರದ್ಧಾಂಜಲಿ ಅರ್ಪಿಸುತ್ತ ಬಂದಿದ್ದಾರೆ.

ಹೊತ್ತಿ ಉರಿದ ತಾಜ್​ ಹೋಟೆಲ್​

ಇಂದು ಸಹ ಈ ಕಾರ್ಯಕ್ರಮ ಜರುಗಲಿದ್ದು, ಇದರಲ್ಲಿ ಹುತಾತ್ಮರಾದ ಪೊಲೀಸ್​​ ಕುಟುಂಬಸ್ಥರು ಮತ್ತು ಭದ್ರತಾ ಸಿಬ್ಬಂದಿ ಭಾಗಿಯಾಗಲಿದ್ದಾರೆ.

9 ಉಗ್ರರು ಬಲಿ, ಕಸಬ್ ಸೆರೆ:

ಮುಂಬೈ ಮಹಾನಗರ ತಲುಪಿದ್ದ 10 ಮಂದಿ ಉಗ್ರರು ಸಿಕ್ಕಸಿಕ್ಕವರಿಗೆ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದರು. ಮೊದಲಿಗೆ ಇಲ್ಲಿನ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಉಗ್ರರು, ರೈಲು ಬರುವುದನ್ನೇ ಕಾದಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ಗುಂಡಿನ ಮಳೆಗರೆದಿದ್ದರು.

ದಾಳಿಯ ಕರಾಳತೆ ತೆರೆದಿಟ್ಟ ಫೋಟೊಗಳು

ಇದಾದ ಬಳಿಕ ನಾರಿಮನ್ ಹೌಸ್ ಕಾಂಪ್ಲೆಕ್ಸ್​ ತಲುಪಿದ್ದ ಉಗ್ರರು ಅಲ್ಲಿಯೂ ಮನಸೋಯಿಚ್ಛೆ ಅಮಾಯಕರ ಬಲಿ ಪಡೆದರು. ಮೂರನೆಯದಾಗಿ ಲಿಯೋಪೋಲ್ಡ್​ ಕೆಫೆಗೆ ನುಗ್ಗಿ ಹಲವರನ್ನು ಬಲಿ ಪಡೆದಿದ್ದರು. ಇದಾದ ಬಳಿಕ ಮುಂಬೈನ ಹೃದಯ ಭಾಗದಲ್ಲಿನ ತಾಜ್ ಹೋಟೆಲ್​​​ನಲ್ಲಿ ಅಡಗಿ ಕುಳಿತಿದ್ದ ರಾಕ್ಷಸರು ಅಲ್ಲಿದ್ದ ನಾಗರಿಕರ ಮೇಲೆ ದಾಳಿ ಮಾಡಿದ್ದರು.

ನಾಲ್ಕು ದಿನಗಳ ಕಾಲ ಹೋಟೆಲ್​​ನಲ್ಲಿದ್ದ ಉಗ್ರರು, ಭದ್ರತಾ ಪಡೆಯ 18 ಯೋಧರನ್ನು ಕೊಂದಿದ್ದರು. ಆದರೆ ಒಟ್ಟು 10 ಮಂದಿ ಉಗ್ರರನ್ನು ಹತ್ಯೆ ಮಾಡಿದ್ದ ಭದ್ರತಾ ಪಡೆ ಉಗ್ರ ಅಜ್ಮಲ್ ಕಸಬ್​​ನನ್ನು ಜೀವಂತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಅಜ್ಮಲ್ ಅಮಿರ್ ಕಸಬ್​ನನ್ನು ನವೆಂಬರ್ 21, 2012ರಲ್ಲಿ ಪುಣೆಯ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು.

ಇದನ್ನೂ ಓದಿ:coal mine fire: ಕಲ್ಲಿದ್ದಲು ಗಣಿಯಲ್ಲಿ 52 ಜನ ಸಜೀವ ದಹನ!

Last Updated : Nov 26, 2021, 8:33 AM IST

ABOUT THE AUTHOR

...view details