ನವದೆಹಲಿ:ದೇಶದ ಪೊಲೀಸ್ ವ್ಯವಸ್ಥೆ ಸಾಕಷ್ಟು ಸುಧಾರಣೆ ಕಾಣಲೇಬೇಕಿದೆ. ಅಪರಾಧಗಳನ್ನು ತಡೆಯಬೇಕಿರುವ ಪೊಲೀಸ್ ಠಾಣೆಗಳೇ ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿವೆ. ದೇಶದ 257 ಪೊಲೀಸ್ ಠಾಣೆಗಳಲ್ಲಿ ಯಾವುದೇ ವಾಹನ ಸೌಕರ್ಯವೇ ಇಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಂಗಳವಾರ ಅಚ್ಚರಿಯ ಮಾಹಿತಿ ನೀಡಿದೆ.
ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಪೊಲೀಸ್ ಠಾಣೆಗಳಲ್ಲಿ ವಾಹನಗಳ ಕೊರತೆ ಮಾತ್ರವಲ್ಲದೇ, 638 ಪೊಲೀಸ್ ಠಾಣೆಗಳಿಗೆ ದೂರವಾಣಿ ಸಂಪರ್ಕವಿಲ್ಲ. 143 ಠಾಣೆಗಳಲ್ಲಿ ವೈರ್ಲೆಸ್ ಸೆಟ್ ಅಥವಾ ಮೊಬೈಲ್ ಇಲ್ಲ. ರಾಜ್ಯಗಳು ತಮ್ಮ ಪೊಲೀಸ್ ಪಡೆಗಳನ್ನು ಆಧುನೀಕರಣಗೊಳಿಸಲು ಎಎಸ್‌ಎಂಪಿ ನೆರವು ಯೋಜನೆಯಡಿ ಹಣಕಾಸು ಸಹಾಯ ನೀಡಲಾಗುತ್ತದೆ ಎಂದಿದ್ದಾರೆ.