ಕರ್ನಾಟಕ

karnataka

ETV Bharat / bharat

ಬೇಸಿಗೆ ಧಗೆಯ ಪರಿಣಾಮ: ಚಂಡೀಗಢದಲ್ಲಿ 1 ಕೆಜಿ ನಿಂಬೆಹಣ್ಣಿನ ದರ ₹250 - ಚಂಡೀಗಢದಲ್ಲಿ ನಿಂಬೆಹಣ್ಣಿಗೆ ಭಾರಿ ಬೇಡಿಕೆ

ಬೇಸಿಗೆ ಕಾಲದಲ್ಲಿ ತಂಪುಪಾನೀಯಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. ಅದರಂತೆ ನಿಂಬೆಹಣ್ಣಿಗೂ ಬಂಗಾರದ ಬೆಲೆ ಬಂದಿದೆ.

lemon price
ನಿಂಬೆಹಣ್ಣಿನ ದರ

By

Published : Apr 10, 2022, 5:11 PM IST

ಚಂಡೀಗಢ:ಬೇಸಿಗೆಯ ಧಗೆ ಹೆಚ್ಚಿದಂತೆ ತಂಪು ಪಾನೀಯಗಳ ಬೆಲೆಯೂ ಏರುತ್ತಿವೆ. ಈ ಸೆಖೆಯಲ್ಲಿ ದೇಹಕ್ಕೆ ತಂಪು ನೀಡುವ ನಿಂಬೆಹಣ್ಣಿಗೆ ಭಾರಿ ಬೇಡಿಕೆ ಬಂದಿದೆ. ಚಂಡೀಗಢದಲ್ಲಿ 1 ಕೆಜಿ ನಿಂಬೆಹಣ್ಣು 250 ರೂಪಾಯಿ ಧಾರಣೆ ಕಂಡು ಸಾರ್ವಕಾಲಿಕ ದಾಖಲೆ ಸೃಷ್ಟಿಸಿತು.

ಬೇಸಿಗೆಯಲ್ಲಿ ಸಹಜವಾಗಿ ನಿಂಬೆಹಣ್ಣಿಗೆ ಬೆಲೆ ಇರುತ್ತದೆ. ಆದರೆ, ಈ ಬಾರಿ ವಾತಾವರಣದಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾದ ಕಾರಣ ಜನರು ತಂಪು ಪಾನೀಯದ ಮೊರೆ ಹೋಗುತ್ತಿರುವುದು ಅಧಿಕವಾಗಿದೆ. ಹೀಗಾಗಿ ನಿಂಬೆಹಣ್ಣಿನ ಬಳಕೆಯೂ ಹೆಚ್ಚಿದೆ. ಸಹಜವಾಗಿ ಈ ಸಮಯದಲ್ಲಿ ಒಂದು ಕೆಜಿ ನಿಂಬೆಹಣ್ಣಿನ ದರ ಸಗಟು ಮಾರುಕಟ್ಟೆಯಲ್ಲಿ 120- 130 ರೂ. ಇರುತ್ತಿತ್ತು. ಈ ಬಾರಿ ಅದು 250 ರೂ. ತಲುಪಿದೆ.

ಮಾರುಕಟ್ಟೆಯಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ನಿಂಬೆಹಣ್ಣು ದಾಸ್ತಾನು ಸಿಗದ ಕಾರಣ ಬೆಲೆ ಗಗನಮುಖಿಯಾಗಿದೆ. ಅಲ್ಲದೇ ಉತ್ಪಾದಕರೂ ಕೂಡ ನಿಂಬೆಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಇಟ್ಟಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:'ಜಗತ್ತಿನಾದ್ಯಂತ ಅಪಹಾಸ್ಯಕ್ಕೆ ಒಳಗಾಗಿರುವ ಪಕ್ಷ ನಮ್ಮದಲ್ಲ': ರಾಹುಲ್‌ಗೆ ಮಾಯಾವತಿ ತಿರುಗೇಟು

ABOUT THE AUTHOR

...view details