ನವದೆಹಲಿ: ರಷ್ಯಾದ ಮಿಲಿಟರಿಯೊಂದಿಗೆ ಯುದ್ಧತಂತ್ರದ ದ್ವಿಪಕ್ಷೀಯ ‘ಇಂದ್ರ-2021’ ಅಭ್ಯಾಸಕ್ಕಾಗಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯು ಸೇನೆಯ ಸುಮಾರು 250 ಸಿಬ್ಬಂದಿ ಆಗಸ್ಟ್ 1ರಿಂದ 15ರವರೆಗೆ ಅಭ್ಯಾಸಕ್ಕಾಗಿ ರಷ್ಯಾಕ್ಕೆ ತೆರಳಲಿದ್ದಾರೆ. ನಂತರ ಭಾರತ ಮತ್ತು ಪಾಕಿಸ್ತಾನ ಸೇನೆಗಳು ಜಂಟಿಯಾಗಿ ಭಾಗವಹಿಸುವ ಮತ್ತೊಂದು ಅಭ್ಯಾಸ ನಡೆಯಲಿದೆ.
"ಅವರು ಬಳಸುವ ಮಿಲಿಟರಿ ಯಂತ್ರಾಂಶ ಸೇರಿದಂತೆ ಭಾರತೀಯ ಪಡೆಗಳು ಹೇಗೆ ಮತ್ತು ಯಾವಾಗ ಹೊರಡುತ್ತವೆ ಎಂಬುದರ ಬಗ್ಗೆ ನಿಖರವಾದ ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ" ಎಂದು ಭಾರತದ ಮಿಲಿಟರಿ ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ.
ಇಂದ್ರ-2021 ಜಂಟಿ ರಷ್ಯಾ-ಭಾರತೀಯ ಮಿಲಿಟರಿ ಕಸರತ್ತು ಈ ವರ್ಷದ ಆಗಸ್ಟ್ 1ರಿಂದ 15ರವರಗೆ ವೋಲ್ಗೊಗ್ರಾಡ್ ಪ್ರದೇಶದ ದಕ್ಷಿಣ ಮಿಲಿಟರಿ ಜಿಲ್ಲೆಯ ಪ್ರುಡ್‌ಬಾಯ್ ತರಬೇತಿ ಮೈದಾನದಲ್ಲಿ ನಡೆಯಲಿದೆ. ಈ ಡ್ರಿಲ್‌ಗಳಲ್ಲಿ ಭಾರತದ ಸಶಸ್ತ್ರ ಪಡೆಗಳ ಸುಮಾರು 250 ಸೈನಿಕರು ಮತ್ತು ದಕ್ಷಿಣ ಮಿಲಿಟರಿ ಡಿಸ್ಟ್ರಿಕ್ಟ್ ಸುಮಾರು 250 ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಮಿಲಿಟರಿ ಡಿಸ್ಟ್ರಿಕ್ಟ್ ಮಾಧ್ಯಮ ಕಚೇರಿ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.