ಕರ್ನಾಟಕ

karnataka

ETV Bharat / bharat

ಶುಭ ಶುಕ್ರವಾರದ ನಿಮ್ಮ ರಾಶಿಯ ಫಲಾಫಲ ಹೇಗಿದೆ...? - 25 December 2020 Etv Bharat horoscope

ಶುಕ್ರವಾರದ ರಾಶಿಫಲ

25 December 2020 Etv Bharat horoscope
ಶುಕ್ರವಾರದ ರಾಶಿಫಲ

By

Published : Dec 25, 2020, 5:01 AM IST

ಮೇಷ

ಅಲೆಯ ಹರಿವಿನೊಂದಿಗೆ ಮುನ್ನಡೆಯಿರಿ. ಇದು ನಿಮ್ಮ ಬಾಂಧವ್ಯಗಳಿಗೆ ಪೂರಕವಾದ ಸಲಹೆ. ಈ ದಿನ ಉದಾರವಾಗಿರುವ ಮತ್ತು ನಿಮ್ಮ ಪ್ರೀತಿಪಾತ್ರರ ಬಯಕೆಗಳನ್ನು ಒಪ್ಪಿಕೊಳ್ಳುವ ದಿನ. ನಿಮ್ಮ ಪ್ರೀತಿಪಾತ್ರರಿಗೆ ಇಂದು ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಬಹುದು.

ವೃಷಭ

ನೀವು ಹೊಸ ಯೋಜನೆ ಪ್ರಾರಂಭಿಸುವುದನ್ನು ತಡ ಮಾಡಬಹುದು. ನಿಮ್ಮ ಪ್ರಿಯತಮೆಯೊಂದಿಗೆ ರೊಮ್ಯಾಂಟಿಕ್ ಪ್ರಯಾಣ ಅಥವಾ ಶಾಪಿಂಗ್ ಮಾಡುವ ಸಾಧ್ಯತೆ ಇದೆ. ಏನೇ ಆದರೂ ಇಂದು ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.

ಮಿಥುನ

ನೀವು ತರ್ಕ ಮತ್ತು ಭಾವನೆಗಳ ನಡುವೆ ಸಮತೋಲನ ಸಾಧಿಸಲು ಬಹಳ ಕಷ್ಟಪಡುತ್ತೀರಿ. ಜಗತ್ತಿನ ಮುಂದೆ ಅದರಲ್ಲಿ ನೀವು ಯಶಸ್ವಿಯಾದರೂ, ನಿಮ್ಮ ಮಿತ್ರರೊಂದಿಗೆ ವಿವೇಚನಾಯುಕ್ತರಾಗಿರುವುದಿಲ್ಲ. ಪ್ರಿಯತಮೆಯೊಂದಿಗೆ ಅದ್ಭುತ ಸಮಯ ಕಳೆಯುತ್ತೀರಿ. ಆದರೆ ನಿಮ್ಮ ದೈಹಿಕ ಹೊರನೋಟ ನಿಮಗೆ ಕಾಳಜಿ ಉಂಟು ಮಾಡುತ್ತದೆ.

ಕರ್ಕಾಟಕ

ನಿಮ್ಮ ದಾರಿಯಲ್ಲಿ ಹೊಸ ಜವಾಬ್ದಾರಿಗಳು ಬಂದಂತೆ, ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ ಮತ್ತು ಅದರಿಂದ ಸುಸ್ತಾದ ಭಾವನೆ ಹೊಂದುತ್ತೀರಿ. ನೀವು ಮುನ್ನಡೆದಂತೆ ಒತ್ತಡ ಉಂಟಾಗುವ ಸಾಧ್ಯತೆ ಇದೆ.

ಸಿಂಹ

ನೀವು ಇಂದು ಅತ್ಯಂತ ಭಾವನಾತ್ಮಕ ಮತ್ತು ಉದ್ವೇಗಕ್ಕೆ ಒಳಗಾಗುತ್ತೀರಿ. ನಿಮ್ಮ ಅಹಂ ಸರಿಯಾದ ಸಮಯದಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸದಂತೆ ತಡೆಯುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂವಹನದ ಪ್ರಯತ್ನ ನಡೆಸುವಾಗ ನೀವು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ಪ್ರೇಮಿಗಳಿಗೆ ಒಳ್ಳೆಯ ದಿನವಾಗಿದೆ.

ಕನ್ಯಾ

ಇಂದು ವೆಚ್ಚಗಳು ನಿಯಂತ್ರಣವಿಲ್ಲದೆ ಏರುತ್ತವೆ, ಮತ್ತು ಅವುಗಳು ಬಹುತೇಕ ವ್ಯರ್ಥವಾಗಿರುತ್ತವೆ. ಆದಾಗ್ಯೂ, ಧನಾತ್ಮಕ ಶಕ್ತಿಗಳು ವೇಗ ಪಡೆಯುತ್ತಿವೆ. ಅವುಗಳನ್ನು ನಿಮ್ಮ ವೈಯಕ್ತಿಕ ಹಾಗೂ ವೃತ್ತಿ ಕ್ಷೇತ್ರಗಳಲ್ಲಿ ಪೂರ್ಣ ಬಳಕೆ ಮಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ.

ತುಲಾ

ನಿಮ್ಮ ವ್ಯಕ್ತಿತ್ವ ಉನ್ನತಗೊಳಿಸಲು ಮತ್ತು ನಿಮ್ಮ ಪ್ರತಿಭೆಗಳನ್ನು ವಿಶ್ವಕ್ಕೆ ಸಾಬೀತುಪಡಿಸಲು ಇದು ಅತ್ಯಂತ ಸೂಕ್ತ ಕಾಲ. ಇಂದು, ನೀವು ಹೊಸ ಬಟ್ಟೆಗಳನ್ನು ಕೂಡಾ ಕೊಳ್ಳುತ್ತೀರಿ. ನಿಮಗೆ ಹತ್ತಿರವಿರುವ ಜನರಿಗೆ ಗಮನ ನೀಡುತ್ತೀರಿ. ಇಂದು ನೀವು ನಿಮ್ಮ ಕನಸಿನ ವಿಶ್ವದಲ್ಲಿ ದಿನವನ್ನು ಕಳೆಯುತ್ತೀರಿ.

ವೃಶ್ಚಿಕ

ನೀವು ಹೊಸ ಕಾರ್ಯಕ್ರಮಗಳಿಗೆ ಸಜ್ಜಾಗುತ್ತಿರುವುದರಿಂದ ನಿಮ್ಮ ಶಕ್ತಿಯ ಮಟ್ಟ ಹೆಚ್ಚಾಗಿದೆ. ಆದಾಗ್ಯೂ, ಈ ಕಾರ್ಯಕ್ರಮಗಳು ನಿಮ್ಮ ನಿರೀಕ್ಷೆಗಳನ್ನು ತಲುಪದೇ ಇರುವ ಸಾಧ್ಯತೆಗಳಿವೆ. ಆದರೆ, ಭರವಸೆ ಕಳೆದುಕೊಳ್ಳಬೇಡಿ ಮತ್ತು ನಿರುತ್ಸಾಹಗೊಳ್ಳಬೇಡಿ. ನಿಮ್ಮ ಸ್ಫೂರ್ತಿಯನ್ನು ಎತ್ತರದಲ್ಲಿರಿಸಿಕೊಳ್ಳಿರಿ. ಯಶಸ್ವಿಯಾಗುವವರೆಗೂ ಮತ್ತೆ ಮತ್ತೆ ಪ್ರಯತ್ನಿಸಿ ಎಂದು ಶಾಲೆಯಲ್ಲಿ ಕಲಿತ ಮೊದಲ ಪಾಠವನ್ನು ಅನುಷ್ಠಾನಗೊಳಿಸಿ.

ಧನು

ವಿದೇಶಗಳ ಸಂಪರ್ಕಗಳನ್ನು ಬಳಸಿಕೊಳ್ಳುವುದರಿಂದ ನಿಮ್ಮ ವ್ಯಾಪಾರ ವಿಸ್ತರಿಸಲು ಸಜ್ಜಾಗಿದೆ. ನಿಮ್ಮ ಗುರಿಗಳನ್ನು ಪೂರೈಸಿಕೊಳ್ಳಲು ಪರಿಣಾಮಕಾರಿ ಸಂವಹನ ಕೌಶಲ್ಯಗಳು ನಿಮಗೆ ನೆರವಾಗಲಿದೆ. ಅಲ್ಲದೆ, ನಿಮ್ಮ ತಂಡದ ನಾಯಕನಾಗಲು ನೀವು ಎಲ್ಲಾ ಸರಿಯಾದ ನಡೆಗಳನ್ನೇ ಅನುಸರಿಸುತ್ತಿದ್ದೀರಿ.

ಮಕರ

ಯಶಸ್ಸಿನ ಬಾಗಿಲುಗಳನ್ನು ತೆರೆಯಲು ವಿಶ್ವಾಸವೇ ಮುಖ್ಯ. ಇಂದು, ನಿಮ್ಮ ಧನಾತ್ಮಕ ಪ್ರವೃತ್ತಿಯಿಂದ ನಿಮ್ಮ ಅಸ್ತಿತ್ವ ಸಾಬೀತುಪಡಿಸುತ್ತೀರಿ ಮತ್ತು ಯಶಸ್ಸಿಗೆ ಒಂದು ಹೆಜ್ಜೆ ಮುಂದೆ ಬರುತ್ತೀರಿ. ನೀವು ಉದಾಸೀನದ ವ್ಯಕ್ತಿಯಲ್ಲ. ನಿಮ್ಮ ಸಾಧನೆಗಳಿಗೆ ನೀವು ಮೌಲ್ಯ ನೀಡುತ್ತೀರಿ ಮತ್ತು ಪ್ರತಿ ನಿರ್ಧಾರವನ್ನೂ ಜಾಣ್ಮೆಯಿಂದ ಕೈಗೊಳ್ಳುತ್ತೀರಿ.

ಕುಂಭ

ನಿಮಗೆ ಇಂದು ಪಾರ್ಟಿ ಮಾಡಲು ಕಾರಣ ಬೇಕಿಲ್ಲ. ಅದು ನಿಮ್ಮ ಮಿತ್ರನ ವಿವಾಹವಾಗಿರಬಹುದು ಅಥವಾ ಹೊಸ ಕಾರು ಕೊಳ್ಳುವುದಿರಬಹುದು. ನೀವು ಜೀವನವನ್ನು ಇನ್ನಿಲ್ಲದಂತೆ ಸಂಭ್ರಮಿಸುವ ಮನಸ್ಥಿತಿಯಲ್ಲಿದ್ದೀರಿ. ಇದಲ್ಲದೆ, ಇಡೀ ದಿನ ನೀವು ಸರಾಗವಾಗಿ ಮುನ್ನಡೆಯುತ್ತೀರಿ. ನೀವು ವ್ಯಾಪಾರಿ ಅಥವಾ ವೃತ್ತಿಪರರಾಗಿರಲಿ, ನೀವು ನಿಮ್ಮ ಗುರಿಗೆ ಒಂದು ಹೆಜ್ಜೆ ಮುಂದೆ ಸಾಗುತ್ತೀರಿ.

ಮೀನ

ಗೊಂದಲ ಮತ್ತು ಅನಿಶ್ಚಿತತೆ ಕಪ್ಪು ಮೋಡಗಳ ಹಾಗೆ ಇಂದಿನ ಆಕಾಶದಲ್ಲಿ ಮೂಡುತ್ತವೆ. ಅವು ನಿಮ್ಮ ನಿರ್ಧಾರ ಕೈಗೊಳ್ಳುವ ನಡೆಯಲ್ಲಿ ಮಳೆ ಸುರಿಸುತ್ತವೆ ಮತ್ತು ನಿಮಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವುದನ್ನು ಕಷ್ಟವಾಗಿಸುತ್ತವೆ. ಗೊಂದಲದಿಂದ ದೂರವಿರಿ ಮತ್ತು ಯಾವುದೇ ಪ್ರಮುಖ ನಿರ್ಧಾರಗಳನ್ನು ಪ್ರಯತ್ನಿಸಿ ಮತ್ತು ತಡ ಮಾಡಿರಿ ಹಾಗೂ ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಬದ್ಧರಾಗಿರಿ.

ABOUT THE AUTHOR

...view details