ನವದೆಹಲಿ: ಕೇವಲ 24 ಗಂಟೆಗಳಲ್ಲಿ ದೆಹಲಿಯ ಶ್ರೀಗಂಗಾ ರಾಮ್ ಆಸ್ಪತ್ರೆಯಲ್ಲಿ 25 ರೋಗಿಗಳು ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ನಿರ್ದೇಶಕರು ತಿಳಿಸಿದ್ದಾರೆ.
24 ಗಂಟೆಯಲ್ಲಿ ದೆಹಲಿ ಆಸ್ಪತ್ರೆಯಲ್ಲಿ 25 ರೋಗಿಗಳು ಸಾವು.. ತಕ್ಷಣವೇ ತಲುಪಿದ ಆಕ್ಸಿಜನ್ ಟ್ಯಾಂಕರ್ - Oxygen tanker arrives at Sir Ganga Ram Hospital
![24 ಗಂಟೆಯಲ್ಲಿ ದೆಹಲಿ ಆಸ್ಪತ್ರೆಯಲ್ಲಿ 25 ರೋಗಿಗಳು ಸಾವು.. ತಕ್ಷಣವೇ ತಲುಪಿದ ಆಕ್ಸಿಜನ್ ಟ್ಯಾಂಕರ್ Oxygen tanker arrives at Sir Ganga Ram Hospital](https://etvbharatimages.akamaized.net/etvbharat/prod-images/768-512-11506527-thumbnail-3x2-megha.jpg)
09:51 April 23
25 ರೋಗಿಗಳು ಮೃತಪಟ್ಟಿದ್ದು, ತುರ್ತಾಗಿ ಆಕ್ಸಿಜನ್ ಬೇಕಿದೆ ಎಂದು ದೆಹಲಿಯ ಶ್ರೀಗಂಗಾ ರಾಮ್ ಆಸ್ಪತ್ರೆಯ ನಿರ್ದೇಶಕರು ಹೇಳಿದ ಬೆನ್ನಲ್ಲೇ ಆಸ್ಪತ್ರೆಗೆ ಆಕ್ಸಿಜನ್ ಟ್ಯಾಂಕ್ ಅನ್ನು ಕಳುಹಿಸಿಕೊಡಲಾಗಿದೆ.
ಆಕ್ಸಿಜನ್ ಕೊರತೆಯೇ ಕಾರಣ ಎಂದು ಉಲ್ಲೇಖಿಸದ ಅವರು, ಮುಂದಿನ ಎರಡು ಗಂಟೆಗಳಲ್ಲಿ ಆಮ್ಲಜನಕ ಖಾಲಿಯಾಗಲಿದೆ. ವೆಂಟಿಲೇಟರ್ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇನ್ನೂ 60 ರೋಗಿಗಳ ಜೀವ ಅಪಾಯದಲ್ಲಿದ್ದು, ತುರ್ತಾಗಿ ಆಕ್ಸಿಜನ್ ಬೇಕಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಭಾರತದಲ್ಲಿ ಕೊರೊನಾರ್ಭಟ: ಒಂದೇ ದಿನ 2,263 ಮಂದಿ ಬಲಿ.. 3,32,730 ಜನರಿಗೆ ಸೋಂಕು
ಇವರು ಹೇಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಶ್ರೀಗಂಗಾ ರಾಮ್ ಆಸ್ಪತ್ರೆಗೆ ಆಕ್ಸಿಜನ್ ಟ್ಯಾಂಕರ್ ಅನ್ನು ಕಳುಹಿಸಿಕೊಡಲಾಗಿದೆ.