ಮೊರೆನಾ (ಮಧ್ಯಪ್ರದೇಶ): ವಿಷಕಾರಿ ಮದ್ಯ ಸೇವಿಸಿ 11 ಮಂದಿ ಮೃತಪಟ್ಟು, ಹಲವರು ಅಸ್ವಸ್ಥರಾಗಿರುವ ಘಟನೆ ಮಂಗಳವಾರ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿತ್ತು. ಇದೀಗ ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ನಿನ್ನೆ ಈ ಸಂಖ್ಯೆ 21ಕ್ಕೆ ತಲುಪಿತ್ತು. ಇಂದು ಇನ್ನು ಮೂವರು ಮೃತಪಟ್ಟು ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮೊರೆನಾ ಜಿಲ್ಲೆಯ ಚೈರಾ ಮಾನ್ಪುರ್ ಗ್ರಾಮ ಹಾಗೂ ಪಹವಾಲಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಅದನ್ನು ಕುಡಿದ ಜನರು ಸಾವನ್ನಪ್ಪಿದ್ದಾರೆ.
ಅಸ್ವಸ್ಥರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಗ್ವಾಲಿಯರ್ಗೆ ಶಿಫ್ಟ್ ಮಾಡಲಾಗಿತ್ತು.