ಕಾನ್ಪುರ್ದೇಹತ್ (ಉತ್ತರಪ್ರದೇಶ): ದೆಹಲಿಯಿಂದ ಕಾನ್ಪುರಕ್ಕೆ ಬರುತ್ತಿದ್ದ ಸರಕು ಸಾಗಣೆ ರೈಲಿನ 24 ಬೋಗಿಗಳು ಉತ್ತರಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ಹಳಿ ತಪ್ಪಿವೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಾನ್ಪುರ್ ದೇಹತ್ನ ಅಂಬಿಯಾಪುರ್ ರೈಲ್ವೆ ನಿಲ್ದಾಣಕ್ಕೆ ರೈಲು ಸಮೀಪವಿರುವಾಗ ಇಂದು ಮುಂಜಾನೆ ಈ ಘಟನೆ ನಡೆದಿದೆ. ಗೂಡ್ಸ್ ರೈಲಿನಲ್ಲಿ ಯಾವುದೇ ಸರಕು ಇರಲಿಲ್ಲ. ಆದರೆ, 24 ಬೋಗಿಗಳು ನಾಶವಾಗಿವೆ. ಗೂಡ್ಸ್ ರೈಲು ಹಳಿ ತಪ್ಪಲು ಕಾರಣವೇನೆಂಬುದನ್ನು ರೈಲ್ವೆ ಅಧಿಕಾರಿಗಳು ಕಂಡು ಹಿಡಿಯುತ್ತಿದ್ದಾರೆ.