ಭುವನೇಶ್ವರ್:ದೇಶದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಅಟ್ಟಹಾಸ ಮುಂದುವರೆದಿದ್ದು, ಒಡಿಶಾದಲ್ಲಿ ಇಂದು ಒಂದೇ ದಿನ 23 ಮಂದಿಗೆ ಒಮಿಕ್ರಾನ್ ದೃಢಪಟ್ಟಿದೆ. ರಾಜ್ಯದಲ್ಲಿ ಹೊಸ ವೈರಸ್ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
ಸೋಂಕಿತರ ಎಲ್ಲಾ ಮಾದರಿಗಳನ್ನು ಜಿನೋಮಿಕ್ ಸೀಕ್ವೆನ್ಸ್‌ಗಾಗಿ ಭುವನೇಶ್ವರದ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್ (ILS)ಗೆ ಕಳುಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
2021 ಡಿಸೆಂಬರ್ 21 ರಂದು ಒಡಿಶಾದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಸೋಂಕಿನ ಎರಡು ಪ್ರಕರಣಗಳು ವರದಿಯಾಗಿದ್ದವು. ಸೋಂಕಿತರು ಕ್ರಮವಾಗಿ ನೈಜೀರಿಯಾ ಮತ್ತು ಕತಾರ್‌ನಿಂದ ವಾಪಸ್ ಆಗಿದ್ದರು.
ಡಿಸೆಂಬರ್ 23 ರಂದು 2, 30 ರಂದು 5 ಪ್ರಕರಣಗಳೊಂದಿಗೆ ಒಡಿಶಾದಲ್ಲಿ ಒಮಿಕ್ರಾನ್ ಸಂಖ್ಯೆ 14ಕ್ಕೆ ಏರಿಕೆಯಾಗಿತ್ತು. ಇಂದು 23 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:ಹೈರಿಸ್ಕ್ ದೇಶದಿಂದ ಬಂದವರಿಂದಲೇ ಹೆಚ್ಚಾಯ್ತು ಕೊರೊನಾ: ಐದೇ ದಿನದಲ್ಲಿ ಬದಲಾಯ್ತು ಬೆಂಗಳೂರಿನ ಚಿತ್ರಣ