ಮುಂಬೈ:ಮಹಾರಾಷ್ಟ್ರ ಸೇರಿ ಕೆಲ ರಾಜ್ಯಗಳಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಶುರುವಾಗಿದ್ದು, ಅತಿ ಹೆಚ್ಚು ಕೊರೊನಾ ಕೇಸ್ಗಳು ಇಲ್ಲಿ ಕಂಡು ಬರುತ್ತಿವೆ. ಇದೀಗ ಮಹಾರಾಷ್ಟ್ರದ ಒಂದೇ ಶಾಲೆಯಲ್ಲಿ ಬರೋಬ್ಬರಿ 225 ಕೋವಿಡ್ ಪ್ರಕರಣ ಕಾಣಿಸಿಕೊಂಡಿವೆ.
ಮಹಾರಾಷ್ಟ್ರದ ವಾಸೀಂ ಜಿಲ್ಲೆಯ ಶಾಲೆಯೊಂದರ ಹಾಸ್ಟೆಲ್ನಲ್ಲಿ 225 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಇಡೀ ಶಾಲೆಯನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಈ ಹಾಸ್ಟೆಲ್ನಲ್ಲಿ 300 ವಿದ್ಯಾರ್ಥಿಗಳು ವಾಸವಾಗಿದ್ದು, ಹೆಚ್ಚಾಗಿ ಅಮರಾವತಿ, ಯವತ್ಮಾಲ್, ಅಕೋಲಾದ ವಿದ್ಯಾರ್ಥಿಗಳಿದ್ದಾರೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾಕ್ಕೆ ಮಾರ್ಗಸೂಚಿ ಮೂಲಕ ಕಡಿವಾಣ ಹಾಕಿದ ಕೇಂದ್ರ ಸರ್ಕಾರ