ಹೈದರಾಬಾದ್: ಶಬರಿಮಲೆಗೆ ತೆರಳುವ ಅಯ್ಯಪ್ಪನ ಭಕ್ತರಿಗಾಗಿ ಅನುಕೂಲವಾಗಲಿ ಎಂದು 22 ವಿಶೇಷ ರೈಲುಗಳನ್ನು ಬಿಡಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವ ದಿನ, ಎಲ್ಲಿಂದ ಎಲ್ಲಿಗೆ ರೈಲು?:ಸಿಕಂದರಾಬಾದ್ ನಿಂದ ಕೊಲ್ಲಂಗೆ ಈ ತಿಂಗಳ 26 ಮತ್ತು ಡಿಸೆಂಬರ್ 3, ಕೊಲ್ಲಂ-ಸಿಕಂದರಾಬಾದ್ಗೆ ನ.28 ಹಾಗೂ ಡಿ.5, ನರಸಾಪುರ- ಕೊಟ್ಟಾಯಂಗೆ ನ.26 ಹಾಗೂ ಡಿ.3, ಕೊಟ್ಟಾಯಂ-ನರಸಾಪುರಗೆ ನ.27 ಹಾಗೂ ಡಿ.4, ಕಾಚಿಗುಡ-ಕೊಲ್ಲಂಗೆ ನ.22, 29 ಹಾಗೂ ಡಿ.6, ಕೊಲ್ಲಂ-ಕಾಚಿಗುಡಕ್ಕೆ ನ. 24 ಹಾಗೂ ಡಿ.1 ಮತ್ತು 8, ಕಾಕಿನಾಡ-ಕೊಟ್ಟಾಯಂಗೆ ನ.23 ಮತ್ತು 30, ಕೊಟ್ಟಾಯಂ-ಕಾಕಿನಾಡಕ್ಕೆ ನ.25 ಮತ್ತು ಡಿ.2, ಸಿಕಂದರಾಬಾದ್-ಕೊಲ್ಲಂಗೆ ನ.24 ಮತ್ತು ಡಿ.1, ನ.25 ಮತ್ತು ಡಿ.2 ರಂದು ಕೊಲ್ಲಂ ನಿಂದ ಸಿಕಂದರಾಬಾದ್ಗೆ ವಿಶೇಷ ರೈಲುಗಳ ಸಂಚಾರ ಇರಲಿದೆ. ಇವುಗಳಲ್ಲಿ ಸ್ಲೀಪರ್ ಮತ್ತು ಜನರಲ್ ಬೋಗಿಗಳ ಜೊತೆಗೆ ಮೊದಲ, ಎರಡನೇ ಮತ್ತು ಮೂರನೇ ವರ್ಗದ ಎಸಿ ಬೋಗಿಗಳು ಸೇರಿವೆ.
ಸುರಕ್ಷತಾ ಮಾನದಂಡಗಳನ್ನು ಅನುಸರಿಸಬೇಕು - ರೈಲ್ವೆ ಜಿಎಂ : ಲೋಕೋ ಪೈಲಟ್ಗಳು ರೈಲುಗಳನ್ನು ಚಲಾಯಿಸುವುವಾಗ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ರೈಲ್ವೆ ಜಿಎಂ ಅರುಣ್ ಕುಮಾರ್ ಜೈನ್ ತಿಳಿಸಿದ್ದಾರೆ. ರೈಲ್ವೆ ನಿಲ್ದಾಣದಿಂದ ಆರು ವಿಭಾಗಗಳ ಅಧಿಕಾರಿಗಳೊಂದಿಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಯಿತು. ಈ ವೇಳೆ, ಲೋಕೋ ಪೈಲಟ್ಗಳು, ಸಹಾಯಕ ಲೋಕೋ ಪೈಲಟ್ಗಳು ಮತ್ತು ರೈಲ್ವೆ ಸಿಬ್ಬಂದಿಗೆ ಕೌನ್ಸೆಲಿಂಗ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.