ಕರ್ನಾಟಕ

karnataka

ETV Bharat / bharat

6 ಗಂಟೆಗಳಲ್ಲಿ 22 ಪುಟದ ವೆಬ್​ಸೈಟ್ ತಯಾರಿಸಿ ದಾಖಲೆ ಬರೆದ ಎಂಜಿನಿಯರ್​ - ಆರು ಗಂಟೆಗಳಲ್ಲಿ 22 ಪುಟಗಳ ವೆಬ್‌ಸೈಟ್‌

ಕೇವಲ ಆರು ತಾಸುಗಳಲ್ಲಿ 22 ಪುಟಗಳ ವೆಬ್​ಸೈಟ್​ ಡಿಸೈನ್ ಮಾಡಿದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ದಾಖಲೆ ನಿರ್ಮಿಸಿದ್ದಾರೆ. ಅವಕಾಶ ನೀಡಿದರೆ ಸರ್ಕಾರದ ವೆಬ್​ಸೈಟ್​ಗಳನ್ನು ಉತ್ತಮಗೊಳಿಸುವುದಾಗಿ ಅವರು ಹೇಳಿದ್ದಾರೆ.

Young engineer designs 22 web pages in 6 hours sets world record
Young engineer designs 22 web pages in 6 hours sets world record

By

Published : Feb 12, 2023, 12:57 PM IST

ವಿಜಯವಾಡ (ಆಂಧ್ರ ಪ್ರದೇಶ): ಯುವ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಕೇವಲ ಆರು ಗಂಟೆಗಳಲ್ಲಿ 22 ಪುಟಗಳ ವೆಬ್‌ಸೈಟ್‌ ಒಂದನ್ನು ತಯಾರಿಸಿ ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇದರೊಂದಿಗೆ ಇವರು ವಿಶ್ವದಾಖಲೆ ನಿರ್ಮಿಸಿದ್ದಾರೆ. ನೆಲ್ಲೂರು ನಿವಾಸಿ ಹಾಗೂ ವೆಬ್ ಡೆವಲಪರ್ ಆಗಿರುವ ವಿನುಕೊಂಡ ಭಾನು ಸಾಯಿ ಪ್ರತಾಪ್ ಅವರು ಹಲವಾರು ಅಡೆತಡೆಗಳನ್ನು ಮೆಟ್ಟಿನಿಂತು ಈ ಸಾಧನೆ ಮಾಡಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು ಈ ಯುವ ಎಂಜಿನಿಯರ್‌ಗಳು ಊಹೆಗೂ ಮೀರಿದ ಸಾಧನೆ ಮಾಡುತ್ತಿದ್ದಾರೆ.

ಐಟಿ ಕ್ಷೇತ್ರ ಮತ್ತಷ್ಟು ವಿಸ್ತಾರಗೊಳ್ಳುತ್ತಿರುವ ಸಂದರ್ಭದಲ್ಲಿ ಎಂಜಿನಿಯರುಗಳು ತಮ್ಮದೇ ಶೈಲಿಯಲ್ಲಿ ಕ್ಷಿಪ್ರ ದಾಪುಗಾಲು ಹಾಕುತ್ತಿದ್ದಾರೆ. ಚಿಕ್ಕಂದಿನಿಂದಲೂ ಭಾನುಗೆ ಹೊಸತನ್ನು ಮಾಡಬೇಕೆಂಬ ಕ್ರಿಯೇಟಿವ್ ಆದ ಮನಸಿತ್ತು. ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಅವರು ಕಡಿಮೆ ಸಮಯದಲ್ಲಿ ಹೆಚ್ಚು ವೆಬ್ ಪುಟಗಳನ್ನು ವಿನ್ಯಾಸಗೊಳಿಸಲು ಕಲಿತರು. ಅಂತಿಮವಾಗಿ, ಅವರು ಕೇವಲ 6 ಗಂಟೆಗಳಲ್ಲಿ ವೆಬ್‌ಸೈಟ್‌ನ 22 ಪುಟಗಳನ್ನು ರಚಿಸಿ ಲಿಂಕನ್ ಬುಕ್ ಆಫ್ ರೆಕಾರ್ಡ್ಸ್ ಅನ್ನು ಪ್ರವೇಶಿಸಿದ್ದಾರೆ. ಈ ಹಿಂದೆ 2015ರಲ್ಲಿ 18 ಗಂಟೆಗಳಲ್ಲಿ ಈ ಸಾಧನೆ ಮಾಡಿದ್ದ ದಾಖಲೆಯನ್ನು ಅವರು ಯಶಸ್ವಿಯಾಗಿ ಮುರಿದರು.

ಭಾನು ವಿಜಯವಾಡದಲ್ಲಿ ನೆಲೆಸಿದ್ದು, ಪ್ರಸ್ತುತ ಮಾರಿಟೆಕ್ ಸಾಫ್ಟ್‌ವೇರ್ ಕಂಪನಿಯಲ್ಲಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂಟು ವರ್ಷಗಳಿಂದ ವೆಬ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಹಳೆಯ ಮಾದರಿಯಲ್ಲೇ ಕೆಲಸ ಮಾಡುವ ಬದಲು ಹೊಸದನ್ನೇನಾದರೂ ಮಾಡುವ ತುಡಿತ ಹೊಂದಿದ್ದಾರೆ. ಈ ಪ್ರಕ್ರಿಯೆಯಲ್ಲಿ, ಅವರು ವೆಬ್‌ಸೈಟ್‌ಗಳನ್ನು ರಚಿಸುವ ಕೆಲ ಅವಕಾಶಗಳನ್ನು ಪಡೆದರು. ಈ ಯುವಕನ ಪ್ರತಿಭೆಯನ್ನು ಗುರುತಿಸಿ ಚೆನ್ನೈ ಮೂಲದ ಲಿಂಕನ್ ಬುಕ್ ಆಫ್ ರೆಕಾರ್ಡ್ಸ್ ಅವರಿಗೆ ಪ್ರಶಂಸಾ ಪತ್ರ ಹಾಗೂ ಚಿನ್ನದ ಪದಕ ನೀಡಿ ಗೌರವಿಸಿದೆ.

ತಮ್ಮ ಸಾಧನೆಯ ಬಗ್ಗೆ ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಭಾನು ಸಾಯಿ, ತಮಿಳುನಾಡು ಸರ್ಕಾರ ತನಗೆ ಉತ್ತಮ ಮನ್ನಣೆ ನೀಡಿದ್ದಕ್ಕಾಗಿ ನಾನು ಹರ್ಷಿಸುತ್ತೇನೆ. ಆದರೆ ಆಂಧ್ರ ಪ್ರದೇಶ ಸರ್ಕಾರ ನನಗೆ ಅದೇ ರೀತಿಯ ಮನ್ನಣೆ ನೀಡಲಿಲ್ಲ ಎಂಬ ಅಸಮಾಧಾನವಿದೆ ಎಂದು ತಿಳಿಸಿದರು. ಇದು ಪ್ರಸ್ತುತ ಹಂತದಿಂದ ಮುಂದೆ ಸಾಗಬೇಕು ಎಂದು ಸರ್ಕಾರದ ವೆಬ್‌ಸೈಟ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ವೆಬ್ ಡೆವಲಪರ್ ಭಾನು ಹಲವಾರು ಸಲಹೆಗಳನ್ನು ನೀಡಿದ್ದಾರೆ. ಆಂಧ್ರಪ್ರದೇಶದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ವೆಬ್‌ಸೈಟ್‌ಗಳನ್ನು ಸುಧಾರಿಸಲು ಸರ್ಕಾರಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಾರೆ. ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸುವ ಅವರ ಹಂಬಲ ಅವರನ್ನು ಮುನ್ನಡೆಸುತ್ತಿದೆ. ವೆಬ್ ಡೆವಲಪ್​ಮೆಂಟ್ ತುಂಬಾ ಸುಲಭ ಮತ್ತು ಸಂಕೀರ್ಣ ಕೌಶಲ್ಯಗಳ ಅಗತ್ಯವಿಲ್ಲ ಎಂದು ಅವರು ಹೇಳಿದರು. ನಿರುದ್ಯೋಗಿ ಯುವಕರಿಗೆ ತರಬೇತಿಯನ್ನೂ ನೀಡುತ್ತಿದ್ದೇನೆ ಎಂದರು.

ಅವರ ಸಾಧನೆಗಳ ಕುರಿತು ಮಾತನಾಡಿದ ಭಾನು ಅವರ ಪತ್ನಿ ಸುಶ್ಮಿತಾ, ತಮ್ಮ ಕನಸನ್ನು ನನಸಾಗಿಸಲು ಭಾನು ಯಾವಾಗಲೂ ಸಂಕಲ್ಪ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದರಿಂದ ಅವರು ಹೊಸ ದಾಖಲೆಯನ್ನು ನಿರ್ಮಿಸಲು ಸಾಧ್ಯವಾಯಿತು ಎಂದು ಹೇಳಿದರು. ವೆಬ್ ಡೆವಲಪ್​ಮೆಂಟ್ ವಿಷಯದಲ್ಲಿ ಅವರ ಯಶಸ್ಸಿನ ಬಗ್ಗೆ ಅವರು ತಮ್ಮ ಸಂತೋಷ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬ್ರೌಸರ್​ನೊಳಗೆ ChatGPT ಅಳವಡಿಸಲಿದೆ ಒಪೇರಾ

ABOUT THE AUTHOR

...view details