ಕರ್ನಾಟಕ

karnataka

ETV Bharat / bharat

ಬಿಎಸ್​ಇ ಸೆನ್ಸೆಕ್ಸ್​, ಎನ್​ಎಸ್​ಇ ನಿಫ್ಟಿ ಶೇ 1 ರಷ್ಟು ಕುಸಿತ: ಮುಂದುವರಿದ ನಕಾರಾತ್ಮಕ ಭಾವನೆ - ಈಟಿವಿ ಭಾರತ ಕನ್ನಡ

ಭಾರತೀಯ ಷೇರು ಮಾರುಕಟ್ಟೆಗಳು ಇಂದು ಇಳಿಕೆಯೊಂದಿಗೆ ಆರಂಭವಾಗಿವೆ. ಇಂದು ಸ್ಥಳೀಯ ಷೇರು ಮಾರುಕಟ್ಟೆಗಳು ಆರಂಭದಲ್ಲಿ ಸುಮಾರು ಶೇ 1 ರಷ್ಟು ಇಳಿಕೆ ದಾಖಲಿಸಿವೆ.

ಷೇರು ಮಾರುಕಟ್ಟೆ ಕುಸಿತ
Share market crash

By

Published : Feb 22, 2023, 1:24 PM IST

ಮುಂಬೈ: ಬುಧವಾರದಂದು ದೇಶೀಯ ಷೇರು ಮಾರುಕಟ್ಟೆಯಲ್ಲಿ ಇಕ್ವಿಟಿ ಸೂಚ್ಯಂಕಗಳು ಸುಮಾರು ಶೇ 1 ರಷ್ಟು ಕುಸಿದವು. ಅಮೆರಿಕದ ಫೆಡರಲ್​ ಬ್ಯಾಂಕ್ ಬಡ್ಡಿದರಗಳನ್ನು ಇನ್ನಷ್ಟು ಏರಿಸಲಿದೆ ಎಂಬ ಆತಂಕದಿಂದ ಭಾರತೀಯ ಮಾರುಕಟ್ಟೆಗಳಲ್ಲಿ ನಕಾರಾತ್ಮಕ ಭಾವನೆ ಮುಂದುವರೆದಿದೆ. ಎನ್‌ಎಸ್‌ಇ ನಿಫ್ಟಿ-50 ಇದು 184.55 ಅಂಕಗಳಷ್ಟು ಕುಸಿದು 17,642.15 ಕ್ಕೆ ತಲುಪಿದೆ ಮತ್ತು 30-ಷೇರು ಬಿಎಸ್‌ಇ ಸೆನ್ಸೆಕ್ಸ್ 603 ಅಂಕಗಳ ಇಳಿಕೆ ಕಂಡು 60,069 ಕ್ಕೆ ತಲುಪಿದೆ. ನಿಫ್ಟಿ ಫಾರ್ಮಾ ಹೊರತುಪಡಿಸಿ ಎಲ್ಲಾ ವಿಶಾಲ ಮಾರುಕಟ್ಟೆ ಮತ್ತು ವಲಯವಾರು ಸೂಚ್ಯಂಕಗಳು ಇಳಿಕೆಯಲ್ಲಿ ವಹಿವಾಟು ನಡೆಸುತ್ತಿವೆ.

ಬ್ಯಾಂಕ್ ನಿಫ್ಟಿ 474.20 ಅಂಕ ಕುಸಿದು 40,199.40 ಕ್ಕೆ ತಲುಪಿದರೆ, ನಿಫ್ಟಿ ಐಟಿ 218 ಅಂಕ ಇಳಿಕೆ ಕಾಣುವ ಮೂಲಕ 30,728.60 ಕ್ಕೆ ತಲುಪಿತು. ನಿಫ್ಟಿಯಲ್ಲಿ ಕೋಲ್ ಇಂಡಿಯಾ, ಹಿಂಡಾಲ್ಕೊ, ಬ್ರಿಟಾನಿಯಾ, ಟಾಟಾ ಸ್ಟೀಲ್ ಮತ್ತು ಅಪೊಲೊ ಆಸ್ಪತ್ರೆ ಷೇರುಗಳು ಏರಿಕೆ ಕಂಡ ಮುಖ್ಯ ಷೇರುಗಳಾಗಿದ್ದರೆ, ಟೆಕ್ ಮಹೀಂದ್ರಾ, ಮಹೀಂದ್ರಾ ಅಂಡ್ ಮಹೀಂದ್ರಾ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್ ಮತ್ತು ವಿಪ್ರೋ ಇಳಿಕೆ ಕಂಡ ಪ್ರಮುಖ ಷೇರುಗಳಾಗಿವೆ.

ಇಂದು ನಿಫ್ಟಿ ಮತ್ತು ಸೆನ್ಸೆಕ್ಸ್ ಕುಸಿಯಲು ಕೆಲ ಕಾರಣಗಳು ಇಲ್ಲಿವೆ:ಅಮೆರಿಕದ ಇಕ್ವಿಟಿ ಮಾರುಕಟ್ಟೆಗಳು ಕಳೆದ ವಹಿವಾಟು ಅವಧಿಯಲ್ಲಿ ಇಳಿಕೆಯೊಂದಿಗೆ ಮುಕ್ತಾಯವಾದವು. ಇಲ್ಲಿನ ಡೌ ಜೋನ್ಸ್ ಇಂಡಸ್ಟ್ರಿಯಲ್ ಇಂಡೆಕ್ಸ್​ ಶೇ 2.06 ರಷ್ಟು ಕುಸಿಯಿತು. ತಂತ್ರಜ್ಞಾನ ಷೇರುಗಳಿಗೆ ಹೆಸರಾದ ನಾಸ್ಡಾಕ್ 294.97 ಅಂಕಗಳು ಅಥವಾ ಶೇ 2.50 ರಷ್ಟು ಕುಸಿದು 11,492.30 ಕ್ಕೆ ತಲುಪಿತು. S&P 500 81.75 ಅಂಕ ಅಥವಾ ಶೇ 2 ರಷ್ಟು ಕುಸಿದು 3,997.34 ಕ್ಕೆ ತಲುಪಿತು.

ಯುಎಸ್ ಮ್ಯಾಕ್ರೋ ಡೇಟಾವು ಜಾಗತಿಕವಾಗಿ ಈಕ್ವಿಟಿ ಮಾರುಕಟ್ಟೆಗಳ ವ್ಯವಹಾರದ ಮೇಲೆ ಪರಿಣಾಮ ಬೀರುವುದನ್ನು ಮುಂದುವರೆಸಿದೆ. ಹಣದುಬ್ಬರವಿಳಿತದ ಪ್ರಕ್ರಿಯೆಯು ನಿಧಾನವಾಗಿದೆ ಎಂದು ಸೂಚಿಸುವ ಆರ್ಥಿಕ ದತ್ತಾಂಶಗಳ ಸರಣಿಗೆ ಅಮೆರಿಕದ ಮಾರುಕಟ್ಟೆಗಳು ತೀವ್ರ ಋಣಾತ್ಮಕವಾಗಿ ಪ್ರತಿಕ್ರಿಯಿಸಿವೆ. ಹೀಗಾಗಿ ಅಮೆರಿಕದ ಕೇಂದ್ರ ಬ್ಯಾಂಕ್ ಮೊದಲೇ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಅವಧಿಗೆ ದರಗಳನ್ನು ಹೆಚ್ಚಿಸುವುದನ್ನು ಮುಂದುವರಿಸಬೇಕಾಗುತ್ತದೆ.

ಇದು 10 ವರ್ಷಗಳ ಬಾಂಡ್ ಮೇಲಿನ ಬಡ್ಡಿಯನ್ನು ಶೇ 3.95 ಕ್ಕೆ ತೀವ್ರವಾಗಿ ಹೆಚ್ಚಿಸಿದೆ ಮತ್ತು ಈ ಬೆಳವಣಿಗೆಗಳಿಂದ ಷೇರುಗಳ ಬೆಲೆಯಲ್ಲಿ ತೀವ್ರವಾಗಿ ಕುಸಿದವು. ಈ ಋಣಾತ್ಮಕ ಅಮೆರಿಕದ ಇಕ್ವಿಟಿ ಮಾರುಕಟ್ಟೆ ಪ್ರವೃತ್ತಿಗಳು ಎಲ್ಲೆಡೆ ಇಕ್ವಿಟಿ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಿವೆ ಮತ್ತು ಭಾರತವು ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರವೃತ್ತಿಯಿಂದ ಹೊರತಾಗಿರಲು ಸಾಧ್ಯವಿಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

11 ಲಕ್ಷ ಕೋಟಿ ಕಳೆದುಕೊಂಡ ಅದಾನಿ ಗ್ರೂಪ್ ಷೇರುಗಳು: 2023-24ರ ಪೂರ್ಣ ಹಣಕಾಸು ವರ್ಷದಲ್ಲಿ ಭಾರತ ಸರ್ಕಾರವು ಬಂಡವಾಳ ವೆಚ್ಚಕ್ಕಾಗಿ ಖರ್ಚು ಮಾಡಲು ಯೋಜಿಸಿದ್ದಕ್ಕಿಂತ ಹೆಚ್ಚು ಮೌಲವನ್ನು ಕೇವಲ 30 ದಿನಗಳಲ್ಲಿ ಅದಾನಿ ಗ್ರೂಪ್ ಷೇರುಗಳು ಕಳೆದುಕೊಂಡಿವೆ. ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ವಿಲ್ಮಾರ್, ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿ ಲಿಮಿಟೆಡ್ ಷೇರುಗಳು ಒಟ್ಟಾರೆಯಾಗಿ ಕಳೆದ ಒಂದು ತಿಂಗಳಲ್ಲಿ 11 ಲಕ್ಷ ಕೋಟಿ ರೂ.ಗಳಷ್ಟು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿವೆ. 2024ರ ಹಣಕಾಸು ವರ್ಷಕ್ಕಾಗಿ ಕೇಂದ್ರ ಸರ್ಕಾರವು 10 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಬಂಡವಾಳ ವೆಚ್ಚಕ್ಕಾಗಿ ನಿಗದಿ ಮಾಡಿದೆ.

ಇದನ್ನೂ ಓದಿ: ಷೇರು ವಹಿವಾಟಿನ ಸ್ಟಾರ್ಟ್‌ಅಪ್‌ ಬೆಂಗಳೂರು Havenspire: ಮೆಕ್ಯಾನಿಕಲ್‌ ಎಂಜಿನಿಯರ್ಸ್​ ವಿನೂತನ ಸಾಧನೆ

ABOUT THE AUTHOR

...view details