ಕರ್ನಾಟಕ

karnataka

By

Published : Sep 9, 2021, 12:53 PM IST

ETV Bharat / bharat

ಅಮೆಜಾನ್ ಉದ್ಯೋಗಿಗಳೆಂದು ಜನರನ್ನು ವಂಚಿಸುತ್ತಿದ್ದ 22 ಮಂದಿ ಬಂಧನ

ಅಮೆಜಾನ್ ಉದ್ಯೋಗಿಗಳೆಂದು ಜನರಿಗೆ ವಂಚಿಸುತ್ತಿದ್ದ 22 ಮಂದಿಯನ್ನ ಬಂಧಿಸಲಾಗಿದೆ. ಹಲವು ಸಾಫ್ಟ್​​ವೇರ್ ಬಳಸಿ ಜನರ ಕಂಪ್ಯೂಟರ್​​​​ಗೆ ಸಂಪರ್ಕ ಕಲ್ಪಿಸಿ ವಂಚಿಸುತ್ತಿದ್ದರು ಎಂಬುದು ಬಯಲಾಗಿದೆ.

22-arrested-in-west-bengal-for-posing-as-amazon-employees-duping-people
ಅಮೆಜಾನ್ ಉದ್ಯೋಗಿಗಳೆಂದು ಜನರ ವಂಚಿಸುತ್ತಿದ್ದ 22 ಮಂದಿ ಬಂಧನ

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಅಮೆಜಾನ್​ ಸಂಸ್ಥೆಯ ಉದ್ಯೋಗಿಗಳೆಂದು ಹೇಳಿಕೊಂಡು ನಕಲಿ ಕಾಲ್​ ಸೆಂಟರ್​ ಮೂಲಕ ಜನರನ್ನು ವಂಚಿಸುತ್ತಿದ್ದ 22 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ರೌಡಿ ನಿಯಂತ್ರಣ ವಿಭಾಗದ ಪೊಲೀಸರು ನಡೆಸಿದ ದಾಳಿಯಲ್ಲಿ ನ್ಯೂ ಅಲಿಪುರದ ಬಂಕಿಂ ಮುಖರ್ಜಿ ಸರಾನಿಯಲ್ಲಿ 22 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಕಾಲ್ ಸೆಂಟರ್​ ನಡೆಸುತ್ತಿದ್ದರು. ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ ಕಮ್ಯುನಿಕೇಶನ್ ಸಿಸ್ಟಮ್ ಮೂಲಕ ಆರೋಪಿಗಳು ತಮ್ಮನ್ನು ಅಮೆಜಾನ್‌ನ ಉದ್ಯೋಗಿಗಳೆಂದು ಪರಿಚಯಿಸಿಕೊಂಡು ಸಂಭಾಷಣೆಗಳನ್ನು ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ ನಿಮಗೆ ಬಹುಮಾನ ಬಂದಿದೆ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದರು. ಮೋಸ ಹೋದವರಲ್ಲಿ ಆಸ್ಟ್ರೇಲಿಯಾ ಪ್ರಜೆಗಳು ಸಹ ಸೇರಿದ್ದಾರೆ. ಆರೋಪಿಗಳು ವಂಚನೆ ಎಸಗಲು ಟೀಮ್ ವೀವರ್, ಎನಿ ಡೆಸ್ಕ್​​​ನಂತಹ ಸಾಫ್ಟ್​​ವೇರ್ ಬಳಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ:ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿ ಕೊಡುವ ನೆಪದಲ್ಲಿ ಲಕ್ಷಾಂತರ ರೂ.ಪಂಗನಾಮ

ABOUT THE AUTHOR

...view details