ಕೊಚ್ಚಿ(ಕೇರಳ):ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ 21 ವರ್ಷದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕೇರಳದ ಎರ್ನಾಕುಲಂನ ಆಲುವಾದಲ್ಲಿ ಈ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ಯುವತಿ ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುಂಚಿತವಾಗಿ ಸೊಸೈಡ್ ನೋಟ್ ಬರೆದಿಟ್ಟಿದ್ದು, ಇದರಲ್ಲಿ ಗಂಡ ಹಾಗೂ ಅತ್ತೆಯ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಜೊತೆಗೆ, ಪೊಲೀಸ್ ಠಾಣೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಇದರ ಬಗ್ಗೆ ದೂರು ನೀಡಿದ್ದಾಗಿ ತಿಳಿದು ಬಂದಿದೆ.
ಮೃತ ಮಹಿಳೆಯನ್ನು 21 ವರ್ಷದ ಮೌಫಿಯಾ ಪರ್ವೀನ್ ಎಂದು ಗುರುತಿಸಲಾಗಿದ್ದು, ಈಕೆ ಎಲ್ಎಲ್ಬಿ ವ್ಯಾಸಂಗ ಮಾಡುತ್ತಿದ್ದಳು ತಿಳಿದು ಬಂದಿದೆ. ಈಗಾಗಲೇ ಸೊಸೈಡ್ ನೋಟ್ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅದರಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ನಿರ್ಲಕ್ಷ್ಯದ ಬಗ್ಗೆ ಸಹ ಬರೆದುಕೊಂಡಿದ್ದಾಳೆ. ಇಡುಕ್ಕಿ ಜಿಲ್ಲೆಯ ಖಾಸಗಿ ಕಾಲೇಜ್ವೊಂದರಲ್ಲಿ ಎಲ್ಎಲ್ಬಿ ವ್ಯಾಸಂಗ ಮಾಡುತ್ತಿದ್ದ ಮಹಿಳೆ ಕಳೆದ ಕೆಲ ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಇದರ ಬೆನ್ನಲ್ಲೇ ನಿನ್ನೆ ಮನೆಯ ಕೋಣೆವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.