ಥಾಣೆ(ಮಹಾರಾಷ್ಟ್ರ): 21 ವರ್ಷದ ಯುವತಿಯೋರ್ವಳ ಮೇಲೆ ಮೂವರು ಕಾಮುಕರು ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಅಂಬರನಾಥ್ನಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಭಾನುವಾರ ಮಧ್ಯಾಹ್ನ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಂಬರ್ನಾಥ್ ಶಾಪ್ನಲ್ಲಿ ಕೆಲಸ ಮಾಡ್ತಿದ್ದ ಹನುಮಾನ್ ಹಾಗೂ ಆತನ ಸ್ನೇಹಿತರಾದ ವಿಶ್ವಾಸ್ ಹಾಗೂ ಜಾವೀದ್ ಮದ್ಯಪಾನ ಮಾಡಲು GIP ಡ್ಯಾಮ್ಗೆ ತೆರಳಿದ್ದಾರೆ. ಈ ವೇಳೆ ತನ್ನ ಸ್ನೇಹಿತೆಗೆ ಹನುಮಾನ್ ಫೋನ್ ಮಾಡಿದ್ದು, ತಾವಿರುವ ಸ್ಥಳಕ್ಕೆ ಬರುವಂತೆ ತಿಳಿಸಿದ್ದಾನೆ.