ಕರ್ನಾಟಕ

karnataka

ETV Bharat / bharat

ಒಬ್ಬನನ್ನ ಪ್ರೀತಿಸಿ ಮತ್ತೊಬ್ಬನೊಂದಿಗೆ ಮದುವೆ.. ಯುವತಿ ಕೊಲೆ ಮಾಡಿದ ಲವರ್​!

ಮದುವೆ ಮಾಡಿಕೊಂಡ ಬಳಿಕ ಕೂಡ ಲವರ್​ನೊಂದಿಗೆ ಮಾತನಾಡುತ್ತಿದ್ದ ವಿವಾಹಿತೆ ಇದೀಗ ಕೊಲೆಯಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

21 Year girlfriend killed
21 Year girlfriend killed

By

Published : Aug 11, 2021, 8:35 PM IST

ಹೈದರಾಬಾದ್​(ತೆಲಂಗಾಣ): ಒಬ್ಬನನ್ನ ಪ್ರೀತಿಸಿ, ಮತ್ತೊಬ್ಬನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯೊಬ್ಬಳು, ಮದುವೆಯಾದ ಬಳಿಕ ಕೂಡ ಲವರ್​ನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಿದ್ದಳು. ಹೀಗಾಗಿ ಯುವತಿಯನ್ನ ಭೇಟಿ ಮಾಡಲು ರಾಕೇಶ್​ ಎಂಬ ಯುವಕ ಬಿಹಾರದಿಂದ ಹೈದರಾಬಾದ್​ಗೆ ಬಂದಿದ್ದನು. ಈ ವೇಳೆ, ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದು, ಯುವತಿಯ ಕೊಲೆ ಮಾಡಿ ಆತ ಪರಾರಿಯಾಗಿದ್ದಾನೆ.

ಹೈದರಾಬಾದ್​ನ ಜೀಡಿಮೆಟ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿ ಇದೀಗ ಕೊಲೆಯಾಗಿದ್ದಾಳೆ. ಬಿಹಾರದ ಪೂಜಾ(21) ರಾಕೇಶ್​ ಎಂಬ ಯುವಕನನ್ನ ಪ್ರೀತಿಸುತ್ತಿದ್ದಳು. ಆದರೆ, ಕಳೆದ ನಾಲ್ಕು ತಿಂಗಳ ಹಿಂದೆ ರಾಜೇಂದ್ರನ್​ ವರ್ಮಾ ಎಂಬ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು.

ಹೊಸದಾಗಿ ಮದುವೆಯಾದ ಬಳಿಕ ಉದ್ಯೋಗಕ್ಕಾಗಿ ಹೈದರಾಬಾದ್​ಗೆ ಬಂದಿದ್ದ ಜೋಡಿ ಜೀಡಿಮೆಟ್ಲಾ ಪ್ರದೇಶದಲ್ಲಿ ಉಳಿದುಕೊಂಡಿದ್ದರು. ಆದರೆ, ಯುವತಿಗೆ ತನ್ನ ಮಾಜಿ ಲವರ್​ನ ಮರೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಗಂಡ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಫೋನ್​ನಲ್ಲಿ ಆತನೊಂದಿಗೆ ಮಾತನಾಡುತ್ತಿದ್ದಳು. ಈ ವೇಳೆ, ಇಬ್ಬರು ಪರಸ್ಪರ ಭೇಟಿ ಮಾಡುವ ನಿರ್ಧಾರ ಸಹ ಮಾಡಿದ್ದಾರೆ.

ಇದನ್ನೂ ಓದಿರಿ: RBI ಹೊಸ ರೂಲ್ಸ್​​: ATMನಲ್ಲಿ ಹಣ ಇಲ್ಲದಿದ್ದರೆ ಬ್ಯಾಂಕ್​ಗಳಿಗೆ 10 ಸಾವಿರ ರೂ. ದಂಡ!

ಹೀಗಾಗಿ ರಾಕೇಶ್​ ಬಿಹಾರನಿಂದ ಹೈದರಾಬಾದ್​ಗೆ ಲವರ್​ ಭೇಟಿ ಮಾಡಲು ಬಂದಿದ್ದಾನೆ. ಗಂಡ ಕೆಲಸಕ್ಕೆ ಹೋಗಿದ್ದರಿಂದ ಇಬ್ಬರು ಮುಖಾಮುಖಿಯಾಗಿದ್ದಾರೆ. ಈ ವೇಳೆ, ತನ್ನೊಂದಿಗೆ ಬರುವಂತೆ ರಾಕೇಶ್​ ಕೇಳಿದ್ದು, ಇದಕ್ಕೆ ಯುವತಿ ನಿರಾಕರಣೆ ಮಾಡಿದಕ್ಕಾಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details