ಕರ್ನಾಟಕ

karnataka

ETV Bharat / bharat

ಪೊಲೀಸರ ಮಿಂಚಿನ ಕಾರ್ಯಾಚರಣೆ.. ₹21 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ, ಆರು ಮಂದಿ ಅಂದರ್​ - ತೂತುಕುಡಿಯಲ್ಲಿ ಮಾದಕವಸ್ತು ಜಪ್ತಿ

ತಮಿಳುನಾಡು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ. ಆರು ಮಂದಿಯನ್ನು ಬಂಧಿಸಿ, ಸುಮಾರು 21 ಕೆಜಿ ಹೆರಾಯಿನ್ ಅನ್ನು ಜಪ್ತಿ ಮಾಡಿದ್ದಾರೆ.

21 kg of heroine seized and 6 arrested in Thoothukudi
ತಮಿಳುನಾಡಿನಲ್ಲಿ 21 ಕೆಜಿ ಹೆರಾಯಿನ್ ಜಪ್ತಿ, ಆರು ಮಂದಿ ಬಂಧನ

By

Published : Dec 23, 2021, 6:45 AM IST

ತೂತುಕುಡಿ(ತಮಿಳುನಾಡು):ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ವಿಚಾರಣೆಗೆ ಒಳಪಡಿಸಿದ ತಮಿಳುನಾಡು ಪೊಲೀಸರು ಸುಮಾರು 21 ಕೆಜಿಯಷ್ಟು ಹೆರಾಯಿನ್​ ಅನ್ನು ಜಪ್ತಿ ಮಾಡಿ, ಸುಮಾರು ಆರು ಮಂದಿಯನ್ನು ಬಂಧಿಸಿದ್ದಾರೆ.

ತೂತುಕುಡಿ ಜಿಲ್ಲೆಯ ತೂವಿಪುರಂ ಮತ್ತು ತರುವೈಕುಲಂ ಪ್ರದೇಶಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಮಂಗಳವಾರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಓಡಾಡುತ್ತಿದ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪೊಲೀಸರಿಂದ ಹೆರಾಯಿನ್ ಪರಿಶೀಲನೆ

ಅವರು ಕೊಟ್ಟ ಮಾಹಿತಿ ಆಧಾರದ ಮೇಲೆ ಮನೆಯೊಂದರ ಮೇಲೆ ರೇಡ್ ಮಾಡಿದ ಪೊಲೀಸರು 21 ಕೋಟಿ ರೂಪಾಯಿ ಮೌಲ್ಯದ 21ಕೆಜಿ ಹೆರಾಯಿನ್ ಅನ್ನು ಜಪ್ತಿ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡವನ್ನು ಜಿಲ್ಲಾ ವರಿಷ್ಠಾಧಿಕಾರಿ ಜೇಯಕುಮಾರ್​ ಶ್ಲಾಘಿಸಿದ್ದಾರೆ.

ಇದನ್ನೂ ಓದಿ:ಮೈಶುಗರ್ ಹಗಲು ದರೋಡೆಗೆ ಮುಂದಾದರಾ ಮಾಜಿ ನೌಕರರು?

ABOUT THE AUTHOR

...view details