ಕರ್ನಾಟಕ

karnataka

ETV Bharat / bharat

21 ಐಎಎಸ್​, 56 ಐಪಿಎಸ್​ ಹಾಗೂ 28 ಐಎಫ್​ಎಸ್​ ಅಧಿಕಾರಿಗಳ ವರ್ಗಾವಣೆ - ರಾಜಸ್ಥಾನ ಸರ್ಕಾರದ ಇತ್ತೀಚಿನ ಸುದ್ದಿ

ರಾಜಸ್ಥಾನ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಅನೇಕ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮಾಡಿ ನಿನ್ನೆ ರಾತ್ರಿ ಆದೇಶ ಹೊರಡಿಸಲಾಗಿದೆ.

Rajasthan government
Rajasthan government

By

Published : Jan 5, 2021, 3:27 PM IST

ಜೈಪುರ್​(ರಾಜಸ್ಥಾನ): ಅಶೋಕ್​ ಗೆಹ್ಲೋಟ್​ ನೇತೃತ್ವದ ರಾಜಸ್ಥಾನ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬರೋಬ್ಬರಿ 21 ಐಎಎಸ್​, 56 ಐಪಿಎಸ್​ ಹಾಗೂ 28 ಐಎಫ್​ಎಸ್​ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

ಇದರ ಜತೆಗೆ ಮೂವರು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ನಿನ್ನೆ ತಡರಾತ್ರಿ ಈ ಆದೇಶ ಗೆಹ್ಲೋಟ್​ ಸರ್ಕಾರದಿಂದ ಹೊರ ಬಿದ್ದಿದೆ. ಜಿಲ್ಲಾಧಿಕಾರಿಗಳಾದ ಚುರು, ಬಾರನ್ ಮತ್ತು ಜಲಾವರ್​ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿಗಳು. ಇದರ ಜತೆಗೆ ಎಡಿಜಿ ನಿನಾ ಸಿಂಗ್​ ಹಾಗೂ ಗೋವಿಂದ್ ಗುಪ್ತಾ, ಐಜಿಗಳಾದ ಬಿನಿತಾ ಠಾಕೂರ್​, ಸಚಿನ್​ ಮಿತಲ್​, ಸಂಜೀಬ್​ ಕುಮಾರ್​​, ಹವಾ ಸಿಂಗ್ ಹಾಗೂ ಸೇಗತಿರಾ ವರ್ಗಾವಣೆಯಾಗಿದ್ದಾರೆ.

ಉದಯಪುರ್​, ಭರತ್​ಪುರ್​, ಬರಾನ್​, ಜೋದಪುರ್​ ಗ್ರಾಮೀಣಮ, ಅಜ್ಮೀರ್​, ಬಿಕಾನೇರ್, ​​ಹನುಮಘಡ ಸೇರಿದಂತೆ ಅನೇಕ ಜಿಲ್ಲೆಗಳ ಎಸ್​ಪಿಗಳು ವರ್ಗಾವಣೆಯಾಗಿದ್ದಾರೆ.

ABOUT THE AUTHOR

...view details